Tuesday, June 23, 2026
Homeಕರಾವಳಿಮಂಗಳೂರುಸುಳ್ಯ : ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ ;ದೂರು ಪ್ರತಿ ದೂರು ದಾಖಲು

ಸುಳ್ಯ : ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ ;ದೂರು ಪ್ರತಿ ದೂರು ದಾಖಲು

- Advertisement -
- Advertisement -

ಸುಳ್ಯ : ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ಮತ್ತು  ಪ್ರತಿ ದೂರು ದಾಖಲಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ.ಮಾಧವ ಎಂಬವರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರವೀಣ ಎಂಬವರು ಸುಳ್ಯ ಠಾಣೆಗೆ ದೂರು ನೀಡಿದ್ದರು. ಇದೀಗ ಮಾಧವ ಅವರು ಪ್ರತಿ ದೂರು ದಾಖಲಿಸಿದ್ದಾರೆ.

ಮಾಧವ ಅವರು ಫೆ.15 ರಂದು ಸುಳ್ಯದ ಓಡಬಾಯಿ ಲಿಕ್ವಿಡ್‌ ಕಾಂಟಿನೆಂಟ್‌ ಬಾರ್‌ಗೆ ಗೆಳೆಯ ಭರತ್‌ ಎಂಬಾತನನ್ನು ನೋಡಲು ಬಂದಿದ್ದರು. ಆತನ ಜೊತೆ ಮಾತಾಡಿ ಬಾರ್‌ ಹೊರಗಡೆ ಅವರ ಪರಿಚಯದ ಪ್ರವೀಣ ಎಂಬಾತನು ಮರದ ರೀಪ್‌ ತುಂಡಿನಿಂದ ಬೆನ್ನಿಗೆ ಹೊಡೆದಿದ್ದಾನೆ. ಈ ವೇಳೆ ಮಾಧವರ ದೊಡ್ಡಪ್ಪನ ಮಗ ವೆಂಕಪ್ಪ ಎನ್ನುವವರು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಈ ವೇಳೆ ಪ್ರವೀಣ ಆತನ ಕೈಯಲ್ಲಿದ್ದ ಕತ್ತಿಯಿಂದ ಬಲಕಾಲಿಗೆ, ಬಲಕೈ ಹಾಗೂ ಎಡಗೈ ಹೆಬ್ಬೆರಳಿಗೆ ಕತ್ತಿಯಿಂದ ಕಡಿದಿದ್ದು, ಎಡಮೊಣಕಾಲಿಗೆ ಗಾಯವಾಗಿ ರಕ್ತ ಬಂದಿದೆ.  ಮಾಧವರಿಗೆ ಹಾಗೂ ಅವರ ದೊಡ್ಡಪ್ಪನ ಮಗನಾದ ವೆಂಕಪ್ಪ ಅವರಿಗೆ ಭೂತಕಟ್ಟುವ ವಿಚಾರದಲ್ಲಿ ಭಿನ್ನಭಿಪ್ರಾಯವಾಗಿ ಪ್ರವೀಣ, ವೆಂಕಪ್ಪ ಅವರ ಜೊತೆ ಗಲಾಟೆಯಾಗಿದ್ದು, ಈ ವಿಚಾರದಲ್ಲಿ ವೈಮನಸ್ಸಿನಿಂದ ವೆಂಕಪ್ಪ ಹಾಗೂ ಪ್ರವೀಣ ಅವರು ಮರದ ರೀಪ್‌ ಹಾಗೂ ಕತ್ತಿಯಿಂದ ಹಲ್ಲೆ ಮಾಡಿ, ನಂತರ ಅಲ್ಲಿಂದ ಹೋಗುತ್ತಾ ಪ್ರವೀಣನು ಮಾಧವರನ್ನುದ್ದೇಶಿಸಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿದ್ದಾಗಿ ಆರೋಪ ಮಡಲಾಗಿದೆ.

ಮಾಧವ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!