- Advertisement -
![]()
- Advertisement -
ತೀರ್ಥಹಳ್ಳಿ: ವಿದ್ಯಾರ್ಥಿಯೊಬ್ಬ ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಸ್ನೇಹಿತರ ಜೊತೆ ಈಜಲು ಹೋಗಿ ಸಾವನ್ನಪ್ಪಿರುವ ಘಟನೆ ಫೆ.16 ಸೋಮವಾರದಂದು ನಡೆದಿದೆ.
ಮೃತ ವಿದ್ಯಾರ್ಥಿಯನ್ನು 19 ವರ್ಷದ ತೇಜಸ್ವಿ ಎನ್ನಲಾಗಿದೆ.
ಪಟ್ಟಣದ ಕುಶಾವತಿ ಬಳಿಯ ನದಿಯ ಸಮೀಪ ಸ್ನೇಹಿತರ ಜೊತೆಗೆ ಹೆದ್ದೂರಿನ ಮಹೇಶ್ ಎನ್ನುವವರ ಪುತ್ರನಾಗಿದ್ದ ತೇಜಸ್ವಿ ಅವರು ಈಜಲು ಹೋಗಿದ್ದರು. ಇವರು ತೀರ್ಥಹಳ್ಳಿಯ ಬಾಳೆಬೈಲಿನ ಡಿಗ್ರಿ ಕಾಲೇಜಿನಲ್ಲಿ ಬಿ ಕಾಂ ವ್ಯಾಸಂಗ ಮಾಡುತ್ತಿದ್ದರು.
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ನಂತರ ಮುಳುಗು ತಜ್ಞ ಪ್ರಮೋದ್ ಪೂಜಾರಿ ಮೃತದೇಹವನ್ನು ಹೊರ ತೆಗೆದಿದ್ದಾರೆ
- Advertisement -


