Monday, October 12, 2026
Homeಕರಾವಳಿಉಡುಪಿಉಡುಪಿ; ಸ್ಕೂಟರ್ ಸವಾರನ ಮೇಲೆ ಪಿಕಪ್ ವಾಹನ ಹರಿದು ಸಾವು

ಉಡುಪಿ; ಸ್ಕೂಟರ್ ಸವಾರನ ಮೇಲೆ ಪಿಕಪ್ ವಾಹನ ಹರಿದು ಸಾವು

- Advertisement -
- Advertisement -

ಉಡುಪಿ; ಸ್ಕೂಟರ್ ಸವಾರನ ಮೇಲೆ ಪಿಕಪ್ ವಾಹನ ಹರಿದು ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ಉಡುಪಿ ಎಂಜಿಎಂ ಕಾಲೇಜಿನ ಎದುರು ರಾಷ್ಟ್ರೀಯ ಹೆದ್ದಾರಿ 169(ಎ)ರಲ್ಲಿ ಗುರುವಾರ ಮಧ್ಯಾಹ್ನ ವೇಳೆ ನಡೆದಿದೆ. ಗೋಪಾಲ್ ಮೂಲ್ಯ ಸಗ್ರಿ(71) ಮೃತ ವ್ಯಕ್ತಿ.

ಗೋಪಾಲ್ ಸಗ್ರಿ ಅವರು ಮಣಿಪಾಲದ ಕಡೆಗೆ ತಮ್ಮ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ, ಎಂಜಿಎಂ ಕಾಲೇಜು ಬಳಿಯ ಡಿವೈಡರ್ ಹತ್ತಿರ ಮತ್ತೊಬ್ಬ ಬೈಕ್ ಸವಾರ ಅಜಾಗರೂಕತೆಯಿಂದ ಏಕಾಏಕಿ ರಸ್ತೆಗೆ ನುಗ್ಗಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿದ ಗೋಪಾಲ್ ರಸ್ತೆಗೆ ಬಿದ್ದಿದ್ದಾರೆ. ತಕ್ಷಣವೇ ಹಿಂದಿನಿಂದ ಅತೀ ವೇಗವಾಗಿ ಬಂದ ಪಿಕಪ್ ವಾಹನವೊಂದು ಇವರ ಮೈಮೇಲೆ ಹರಿದಿದೆ.

ಅಪಘಾತದ ತೀವ್ರತೆಗೆ ಗೋಪಾಲ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!