Tuesday, June 23, 2026
Homeಕರಾವಳಿಮಂಗಳೂರುಮಂಗಳೂರು ; ದೂರು ನೀಡಲು ಪೊಲೀಸ್ ಠಾಣೆಗೆ ಬಂದ ವ್ಯಕ್ತಿಯೇ ಅಂದರ್

ಮಂಗಳೂರು ; ದೂರು ನೀಡಲು ಪೊಲೀಸ್ ಠಾಣೆಗೆ ಬಂದ ವ್ಯಕ್ತಿಯೇ ಅಂದರ್

- Advertisement -
- Advertisement -


ಮಂಗಳೂರು ; ದೂರು ನೀಡಲು ಪೊಲೀಸ್ ಠಾಣೆಗೆ ಬಂದ ವ್ಯಕ್ತಿಯೇ ಅರೆಸ್ಟ್ ಆಗಿರುವ ಅಚ್ಚರಿಯ ಘಟನೆ ಮಂಗಳೂರಿನಲ್ಲಿ ಕಾವೂರಿನಲ್ಲಿ ನಡೆದಿದೆ. ಮಂಜಪ್ಪ ಸುರೇಂದ್ರನ್ ಬಂಧನಕ್ಕೊಳಗಾಗಿರುವ ವ್ಯಕ್ತಿ.


ಮಂಗಳೂರಿನ ಲ್ಯಾಂಡ್‌ ಲಿಂಕ್ಸ್‌ನಲ್ಲಿ  ವಾಸವಿರುವ  ಮಂಜಪ್ಪ ಸುರೇಂದ್ರನ್ ಬಂಧನಕ್ಕೊಳಗಾದ ವ್ಯಕ್ತಿ. ಮನೆಯ ಅಂಗಳದಲ್ಲಿ ಶಟಲ್ ಆಡುತ್ತಿದ್ದ ಯುವಕರ  ಬಗ್ಗೆ ಮಂಜಪ್ಪ ಸುರೇಂದ್ರ ಕಾವೂರು ಪೊಲೀಸರಿಗೆ ದೂರವಾಣಿ ಮೂಲಕ ಪದೇ ಪದೇ ಫೋನ್ ಮಾಡಿ ದೂರು ನೀಡಿದ್ದರು. ಮತ್ತೆ ದೂರು ದಾಖಲಿಸಲು ಕುಡಿದ ಮತ್ತಿನಲ್ಲಿ ಕಾವೂರು ಪೊಲೀಸ್ ಠಾಣೆಗೆ ಹೋದವರು ಅಲ್ಲಿ ಪೊಲೀಸರಿಗೆ ನಿಂದಿಸಿದ್ದಾರೆ. ಈ ಹಿನ್ನಲೆ   ಮಂಜಪ್ಪ ಸುರೇಂದ್ರನ್ ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗೆ ಮಂಗಳೂರಿನ ಮೂರನೇ ಜೆಎಂಎಫ್‌ಸಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Latest News

error: Content is protected !!