- Advertisement -
![]()
- Advertisement -
ಬೆಳ್ತಂಗಡಿ; ಅಪಘಾತದಲ್ಲಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಸೇರಿಸಲು ಶಾಸಕ ಹರೀಶ್ ಪೂಂಜ ನೆರವಾಗಿದ್ದಾರೆ.
ಬಂದಾರು-ಕುಪ್ಪೆಟ್ಟಿ ಮುಖ್ಯ ರಸ್ತೆಯ ಪದ್ಮುಂಜ ಬಳಿ ಬೈಕ್ ಅಪಘಾತವಾಗಿ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದ ಯುವಕನನ್ನು, ಅದೇ ದಾರಿಯಲ್ಲಿ ಬೆಳಾಲು ಆರಿಕೋಡಿ ದೇವಸ್ಥಾನ ಕಾರ್ಯಕ್ರಮ ಮುಗಿಸಿ ಬೇರೊಂದು ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಬಂದ ಶಾಸಕ ಹರೀಶ್ ಪೂಂಜ ಅವರು ಗಮನಿಸಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ತಲುಪಿಸುವಲ್ಲಿ ನೆರವಾಗಿದ್ದಾರೆ.
ಅಪಘಾತಕ್ಕೀಡಾಗಿರುವ ಯುವಕನಿಗೆ ತುರ್ತಾಗಿ ಸ್ಪಂದಿಸಿದ ಹರೀಶ್ ಪೂಂಜರ ಮಾನವೀಯ ಗುಣಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- Advertisement -


