Friday, June 5, 2026
Homeಅಪರಾಧಆನ್‌ ಲೈನ್‌ ನಲ್ಲಿ ಲಕ್ಷಾಂತರ ರೂ ವಂಚನೆ ಪ್ರಕರಣ

ಆನ್‌ ಲೈನ್‌ ನಲ್ಲಿ ಲಕ್ಷಾಂತರ ರೂ ವಂಚನೆ ಪ್ರಕರಣ

- Advertisement -
- Advertisement -

ಮಂಗಳೂರು: ವ್ಯಕ್ತಿಯೊಬ್ಬರ ಖಾತೆಯಿಂದ 10 ಲ.ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯು ಫೆ.5ರಂದು ತನಗೆ ಅಪರಿಚಿತರು ಕಳುಹಿಸಿದ ಎಪಿಕೆ ಲಿಂಕ್ ಡೌನ್ಲೋಡ್ ಮಾಡಿದ್ದು, ಅದರಲ್ಲಿ ತನ್ನ ಮೊಬೈಲ್ ನಂಬರ್ ನಮೂದಿಸಿದ್ದರು. ನಂತರ ಮತ್ತೊಂದು ಮೊಬೈಲ್ ಸಂಖ್ಯೆಯಿಂದ ಅಪರಿಚಿತರು ಪದೇ ಪದೇ ಪೋನ್ ಮಾಡಿ ಕೆವೈಸಿ ದಾಖಲಾತಿಗಳನ್ನು ಕೇಳುತ್ತಿದ್ದರು. ಆದರೆ ತಾನು ನಂಬರ್ ನೀಡಿರಲಿಲ್ಲ. ಆದರೆ ಫೆ.6ರ ರಾತ್ರಿ 9:11ರಿಂದ 9.27ರ ಮಧ್ಯೆ ತನ್ನ ಯೂನಿಯನ್ ಬ್ಯಾಂಕ್ ಪದವು ಶಾಖೆ ಖಾತೆಯಿಂದ 10,00,000 ರೂ.ವನ್ನು ಹಂತ ಹಂತವಾಗಿ ಡೆಬಿಟ್ ಆಗಿರುವ ಬಗ್ಗೆ ಮೆಸೇಜ್ ಬಂದಿದೆ.

ಅಪರಿಚಿತರು ಎಪಿಕೆ ಲಿಂಕ್ ಮೂಲಕ ವೈಯಕ್ತಿಕ ಮಾಹಿತಿಯನ್ನು ಕದ್ದು ಹಣ ವರ್ಗಾಯಿಸಿಕೊಂಡಿರವ ಬಗ್ಗೆ ವ್ಯಕ್ತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!