- Advertisement -
![]()
- Advertisement -
ಮಂಗಳೂರು : ಶಾಸಕ ವೇದವ್ಯಾಸ ಕಾಮತ್ ಅವರ ಪತ್ನಿಯನ್ನು ಅವಮಾನಿಸುವ ರೀತಿ ಪೋಸ್ಟ್ ಹಾಕಿದ್ದ ಯುವಕನೊಬ್ಬನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಟ್ವಾಳ ತಾಲೂಕಿನ ಶರಣ್ ರೈ ಅಮ್ಟಾಡಿ (29) ಬಂಧಿತ ಆರೋಪಿ.
ರಿಯಲ್ ಎಸ್ಟೇಟ್ ಕೆಲಸ ಮಾಡಿಕೊಂಡಿರುವ ಶರಣ್ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಕೆ.ಎಂ. ಶಿವಲಿಂಗೇ ಗೌಡ ಹೇಳಿದ್ದಾರೆ ಎನ್ನಲಾದ ಮಾತನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಶಾಸಕ ವೇದವ್ಯಾಸ ಕಾಮತ್ ಪತ್ನಿಯನ್ನು ಅವಮಾನಿಸುವ ರೀತಿ ಪೋಸ್ಟ್ ಮಾಡಿದ್ದ. ಈ ಬಗ್ಗೆ ಮಹಿಳೆಯೊಬ್ಬರು ಪೊಲೀಸ್ ದೂರು ನೀಡಿದ್ದರು.
ಇಂತಹ ಹೇಳಿಕೆಯಿಂದ ಗೃಹಿಣಿಯಾಗಿರುವ ಶಾಸಕರ ಪತ್ನಿಯ ಬಗ್ಗೆ ಸಮಾಜದಲ್ಲಿ ಅಗೌರವ ಉಂಟಾಗಿದೆ, ಮಹಿಳೆಯರ ಬಗ್ಗೆ ಕೀಳು ಅಭಿರುಚಿಯಿಂದ ಪೋಸ್ಟ್ ಮಾಡಿದ್ದಾಗಿದೆ ಎಂಬ ದೂರಿನಂತೆ ಬಂದರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
- Advertisement -


