ಬೆಳ್ತಂಗಡಿ: ಕರ್ನಾಟಕ ಸರ್ಕಾರದ NSS ಅತ್ಯುತ್ತಮ ರಾಜ್ಯ ಪ್ರಶಸ್ತಿಯನ್ನು ಉಜಿರೆ ಗಾಂಧಿನಗರ ನಿವಾಸಿ ಮುಹಮ್ಮದ್ ನಿಶ್ವಾನ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಗಾಂಧಿನಗರ ನಿವಾಸಿ ನಫೀಸಾ ಶೀಬಾ ಹಾಗೂ ಉಸ್ಮಾನ್ ದಂಪತಿಯ ಪುತ್ರನಾಗಿರುವ ಇವರು ಮಂಗಳೂರಿನ ಯೆನೆಪೋಯ ಯುನಿವರ್ಸಿಟಿಯ ಅಂತಿಮ ವರ್ಷದ MBA ಹಾಗೂ CMA ವಿದ್ಯಾರ್ಥಿ.
ಇವರಿಗೆ ಕರ್ನಾಟಕ ಸರ್ಕಾರದ NSS ಅತ್ಯುತ್ತಮ ರಾಜ್ಯ ಪ್ರಶಸ್ತಿಯು ಕರ್ನಾಟಕ ರಾಜಭವನದಲ್ಲಿ ರಾಜ್ಯಪಾಲರದ ಸನ್ಮಾನ್ಯ ಥಾವರ್ ಚಂದ್ ಗೆಹ್ಲೋಟ್ ಇವರು ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಇವರು ಬಹುಮುಖ ಪ್ರತಿಭೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿ ನಡೆದ ಯುವ ಸಂಸತ್ತಿನಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಕಾಲೇಜಿನ ಕಲಿಕೆಯಲ್ಲಿ Topper ಆಗಿದ್ದು ಸಾಂಸ್ಕೃತಿಕ ಸೇವಾ ರಂಗದ ಉತ್ತಮ ಸಾಧನೆಗಾಗಿ “Best out going student”ಆಗಿ ಆಯ್ಕೆಯಾಗಿದ್ದು, ಪ್ರಸ್ತುತ ಇವರ ವಿದ್ಯಾಭ್ಯಾಸದ ಸಲುವಾಗಿ ಪೋಷಕರೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ.


