Thursday, June 4, 2026
Homeಕರಾವಳಿಉಡುಪಿಬೈಂದೂರು: ಅಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು ವೃದ್ಧೆ ಸಾವು

ಬೈಂದೂರು: ಅಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು ವೃದ್ಧೆ ಸಾವು

- Advertisement -
- Advertisement -

ಬೈಂದೂರು: ತೋಟಕ್ಕೆ ಬರುತಿದ್ದ ವೃದ್ಧೆಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ತುಂಬಿ ಹರಿಯುತಿದ್ದ ತೋಡಿಗೆ ಬಿದ್ದು, ನೀರಿನ ಸೆಳೆತಕ್ಕೆ ಸಿಕ್ಕಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಕಾಲ್ತೋಡು ಗ್ರಾಮದ ಮೂಡುರುನಲ್ಲಿ ನಡೆದಿದೆ.

ಸೂರು ಪೂಜಾರಿ (70) ಮೃತ ವೃದ್ದೆ

ಇವರು ಇಂದು ಬೆಳಗ್ಗೆ ತನ್ನ ತೋಟದಲ್ಲಿ ಬರುತಿದ್ದಾಗ ಪಕ್ಕದಲ್ಲೇ ತುಂಬಿ ಹರಿಯುತಿದ್ದ ತೋಡಿಗೆ ಆಕಸ್ಮಿಕವಾಗಿ ಬಿದ್ದಿದ್ದರು. ತೋಡಿನ ನೀರಿನ ಸೆಳೆತ ಜೋರಾಗಿದ್ದರಿಂದ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ಬೈಂದೂರು ತಹಶೀಲ್ದಾರ್ ಬಸಪ್ಪ ತಿಳಿಸಿದ್ದಾರೆ.

- Advertisement -

Latest News

error: Content is protected !!