Tuesday, May 14, 2024
HomeUncategorizedBreaking: ಶಿರಾ ಶಾಸಕ, ಮಾಜಿ ಸಚಿವ ಸತ್ಯನಾರಾಯಣ ನಿಧನ

Breaking: ಶಿರಾ ಶಾಸಕ, ಮಾಜಿ ಸಚಿವ ಸತ್ಯನಾರಾಯಣ ನಿಧನ

spot_img
- Advertisement -
- Advertisement -

ಬೆಂಗಳೂರು: ಶಿರಾ ವಿಧಾನಸಭಾ ಕ್ಷೆತ್ರದ ಜೆಡಿಎಸ್ ಶಾಸಕ ಸತ್ಯನಾರಾಯಣ ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು.

ಸತ್ಯನಾರಾಯಣ ಅವರಿಗೆ 67 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಶಾಸಕರು ಕೆಲದಿನಗಳಿಂದ ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದರು. ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರ ಇದ್ದಾರೆ. ಜೆಎಚ್​ ಪಟೇಲ್​ರ ಸಂಪುಟದಲ್ಲಿ ಸತ್ಯನಾರಾಯಣ ಸಚಿವರಾಗಿದ್ದರು.

ಸತ್ಯನಾರಾಯಣರ ಸಾವಿಗೆ ಪಕ್ಷದ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

- Advertisement -
spot_img

Latest News

error: Content is protected !!