Friday, June 5, 2026
Homeಕರಾವಳಿಉಡುಪಿಉಡುಪಿ : ಕೋಡಿಬೇಂಗ್ರೆಯಲ್ಲಿ ದೋಣಿ ದುರಂತದಲ್ಲಿ ಮೂವರು ಸಾವನ್ನಪ್ಪಿದ ಪ್ರಕರಣ; ಮೂವರನ್ನುಬಂಧಿಸಿದ ಪೊಲೀಸರು

ಉಡುಪಿ : ಕೋಡಿಬೇಂಗ್ರೆಯಲ್ಲಿ ದೋಣಿ ದುರಂತದಲ್ಲಿ ಮೂವರು ಸಾವನ್ನಪ್ಪಿದ ಪ್ರಕರಣ; ಮೂವರನ್ನುಬಂಧಿಸಿದ ಪೊಲೀಸರು

- Advertisement -
- Advertisement -

ಉಡುಪಿ : ಕೋಡಿಬೇಂಗ್ರೆಯಲ್ಲಿ ದೋಣಿ ದುರಂತದಲ್ಲಿ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂವರನ್ನುಬಂಧಿಸಿದ್ದಾರೆ. ಸುಹಾಸ್ ಶ್ರೀಯಾನ್ (23), ಸುಫಿಯಾನ್ (20) ಮತ್ತು ವಾಸು ಮೆಂಡನ್ (52)ಬಂಧಿತರು.

ದಿನಾಂಕ 26/01/2026ರಂದು ಬೆಳಿಗ್ಗೆ ಸುಮಾರು 10:45ಗಂಟೆಗೆ ಮೈಸೂರು ನಿವಾಸಿ ಗುರುಪ್ರಸಾದ್ (34) ಸೇರಿದಂತೆ ಒಟ್ಟು 29ಪ್ರವಾಸಿಗರನ್ನು ಆರೋಪಿ ಸುಹಾಸ್ ಎಂಬವರು ಎರಡು ಪ್ರತ್ಯೇಕ ಬೋಟ್‌ಗಳಲ್ಲಿ (ಒಂದು ಬೋಟ್‌ನಲ್ಲಿ 14ಮತ್ತು ಇನ್ನೊಂದರಲ್ಲಿ 15ಜನರಂತೆ) ದೋಣಿ ವಿಹಾರಕ್ಕೆ ಕಳುಹಿಸಿದ್ದರು. ಬೆಳಿಗ್ಗೆ 11:15ಗಂಟೆ ಸುಮಾರಿಗೆ ‘THE WAVE RIDER’ ಎಂಬ ಬೋಟ್ ಸ್ವರ್ಣ ನದಿಯಲ್ಲಿ ವಿಹಾರ ಮಾಡುತ್ತಿದ್ದಾಗ, ಅದರ ಚಾಲಕರಾದ ಸೂಫಿಯಾನ್ ಮತ್ತು ವಾಸು ಅವರುಗಳು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಏಕಾಏಕಿ ಎಡಬದಿಗೆ ತಿರುಗಿಸಿ ಚಲಾಯಿಸಿದ ಪರಿಣಾಮ ಬೋಟ್ ಮಗುಚಿ ಬಿದ್ದಿದೆ.

ಈ ಘಟನೆಯಲ್ಲಿ ಬೋಟ್‌ನಲ್ಲಿದ್ದ 14ಜನರು ನೀರಿಗೆ ಬಿದ್ದಿದ್ದು, ಶಂಕರಪ್ಪ (27), ಕುಮಾರಿ ಸಿಂಧು.ಪಿ (23) ಹಾಗೂ ಕುಮಾರಿ ದಿಶಾ (26) ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಉಳಿದವರು ಅಪಾಯದಿಂದ ಪಾರಾಗಿದ್ದಾರೆ.

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 08/2026ಕಲಂ 284, 125(a), 106 BNS 2023ರಡಿ ಪ್ರಕರಣ ದಾಖಲಿಸಲಾಗಿತ್ತು. ನಂತರದ ತನಿಖೆಯಲ್ಲಿ, ಆರೋಪಿಗಳು ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೇ ದೋಣಿ ವಿಹಾರ ನಡೆಸಿದ್ದು, ಬೋಟ್ ಪ್ರವಾಸಿಗರ ವಿಹಾರಕ್ಕೆ ಸೂಕ್ತವೆಂಬ ಧೃಢೀಕರಣ ಪತ್ರವೂ ಇರಲಿಲ್ಲ ಎಂಬುದು ತಿಳಿದುಬಂದಿದೆ. ಅಲ್ಲದೇ ಲೈಫ್ ಜಾಕೆಟ್‌ಗಳಂತಹ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣ ಕೋಟ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ್ದರಿಂದ ಪ್ರಕರಣವನ್ನು ಕೋಟ ಠಾಣೆಗೆ ವರ್ಗಾಯಿಸಲಾಗಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 14/2026 ಕಲಂ 284, 125(a), 106, 105, 110 ಜೊತೆಗೆ 3(5) BNS ರಡಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!