
ಪುತ್ತೂರು; ಫೇಸ್ ಬುಕ್ ನಲ್ಲಿ ಬಂದ ಜಾಹೀರಾತು ನೋಡಿ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿ ಪುತ್ತೂರಿನ ವ್ಯಕ್ತಿಯೊಬ್ಬರು 51 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ.
ಪುತ್ತೂರಿನ ನಿವಾಸಿಯಾಗಿರುವ ವ್ಯಕ್ತಿ ಈ ಹಿಂದೆ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುತ್ತಿದ್ದರು. 15-11-2025 ರಂದು ಫೇಸ್‌ಬುಕ್‌ನಲ್ಲಿ ಹೆಚ್ಚು ಲಾಭಾಂಶದ ಜಾಹೀರಾತು ನೋಡಿ ವಾಟ್ಸಪ್ ಗ್ರೂಪ್‌ಗೆ ಸೇರಿರುತ್ತಾರೆ. ಈ ಗ್ರೂಪ್ ಹಾಗೂ ವಾಟ್ಸಾಪ್ ಮೂಲಕ ಅಪರಿಚಿತರು VSL (Ventura Securities Limited) ಹೆಸರಿನ ನಕಲಿ ವೆಬ್‌ಪೇಜ್ ಲಿಂಕ್ ಕಳುಹಿಸಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ. ಅದನ್ನು ನಂಬಿ ಪುತ್ತೂರಿನ ವ್ಯಕ್ತಿ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ.51,57,000/- ಹಣ ವರ್ಗಾಯಿಸಿದ್ದಾರೆ. ನಂತರ ವೆಬ್‌ಪೇಜ್‌ನಲ್ಲಿ ಹೆಚ್ಚಿನ ಬ್ಯಾಲೆನ್ಸ್ ತೋರಿಸಿದರೂ ಹಣ ವಾಪಸ್ ಪಡೆಯಲು ಸಾಧ್ಯವಾಗಿಲ್ಲ. ನಂತರ ಅದು ನಕಲಿ ವೆಬ್‌ಪೇಜ್ ಎಂದು ತಿಳಿದುಬಂದಿದೆ. ಈ ಬಗ್ಗೆ ಸಿ ಇ ಎನ್ ಠಾಣಾ CR: 02/2026 U/S 66(D) IT ACT & 318(4),319(2) BNS ACT ಯಂತೆ ಪ್ರಕರಣ ದಾಖಲಾಗಿರುತ್ತದೆ.


