Wednesday, June 24, 2026
Homeಕರಾವಳಿಮಂಗಳೂರುಮಂಗಳೂರು : ಪುತ್ತೂರು & ಬಂಟ್ವಾಳ ಡಿವೈಎಸ್ಪಿಗಳ ವರ್ಗಾವಣೆ

ಮಂಗಳೂರು : ಪುತ್ತೂರು & ಬಂಟ್ವಾಳ ಡಿವೈಎಸ್ಪಿಗಳ ವರ್ಗಾವಣೆ

- Advertisement -
- Advertisement -

ಮಂಗಳೂರು : ರಾಜ್ಯದ 19 ಮಂದಿ ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು ಜ.6 ರಂದು ಆದೇಶ ಮಾಡಿದ್ದಾರೆ. ಇದರಲ್ಲಿ ಬಂಟ್ವಾಳ & ಪುತ್ತೂರು ಹಾಗೂ ಕಾರ್ಕಳ ಡಿವೈಎಸ್ಪಿಗಳನ್ನು ಕೂಡ ವರ್ಗಾವಣೆ ಮಾಡಲಾಗಿದೆ.

ಬಂಟ್ವಾಳ ಉಪವಿಭಾಗ ಡಿವೈಎಸ್ಪಿಯಾಗಿದ್ದ ವಿಜಯಪ್ರಸಾದ್.ಎಸ್ ಅವರನ್ನು ಪಶ್ಚಿಮ ವಲಯ ಐಜಿಪಿ ಮಂಗಳೂರು ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ತೆರವಾದ ಸ್ಥಾನಕ್ಕೆ ಅಂತರಿಕ (ISD) ವಿಭಾಗದಲ್ಲಿದ್ದ ಗಣೇಶ್.ಎಂ.ಹೆಗಡೆಯವರನ್ನು ನೇಮಕ ಮಾಡಲಾಗಿದೆ.

ಪುತ್ತೂರು ಉಪವಿಭಾಗ ಡಿವೈಎಸ್ಪಿಯಾಗಿದ್ದ ಅರುಣ ನಾಗೇಗೌಡ ಅವರನ್ನು ರಾಜ್ಯ ಗುಪ್ತವಾರ್ತೆ(INT) ಗೆ ವರ್ಗಾವಣೆ ಮಾಡಲಾಗಿದ್ದು. ಪುತ್ತೂರು ಉಪವಿಭಾಗದ ಡಿವೈಎಸ್ಪಿ ತೆರವಾದ ಸ್ಥಾನಕ್ಕೆ ರಾಜ್ಯಗುಪ್ತ ವಾರ್ತೆ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿದ್ದ ಪ್ರಮೋದ ಕುಮಾರ್ ಬಿ ಅವರನ್ನು ನೇಮಕ ಮಾಡಲಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ಉಪವಿಭಾಗ ಡಿವೈಎಸ್ಪಿಯಾಗಿ ಪಶ್ಚಿಮ ವಲಯ ಐಜಿಪಿ ಮಂಗಳೂರು ಕಚೇರಿಯಲ್ಲಿದ್ದ ಬೆಳ್ಳಿಯಪ್ಪ.ಕೆ.ಯು ಅವರನ್ನು ನೇಮಕ ಮಾಡಲಾಗಿದೆ.

- Advertisement -

Latest News

error: Content is protected !!