Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಉದ್ಯಮಿಯ ಪತ್ನಿ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನ; ಸ್ಥಳೀಯ ಯುವಕರಿಂದ ಮಹಿಳೆಯ ರಕ್ಷಣೆ...

ಬೆಳ್ತಂಗಡಿ : ಉದ್ಯಮಿಯ ಪತ್ನಿ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನ; ಸ್ಥಳೀಯ ಯುವಕರಿಂದ ಮಹಿಳೆಯ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು

- Advertisement -
- Advertisement -

ಬೆಳ್ತಂಗಡಿ : ಉದ್ಯಮಿಯೊಬ್ಬರ ಪತ್ನಿ ತಮ್ಮ ಕುಟುಂಬದ ಸಮಸ್ಯೆಯಿಂದ ನೊಂದು ಜ.6 ರಂದು ರಾತ್ರಿ ಸುಮಾರು 8:30 ರ ವೇಳೆಗೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಗೆ ಹಾರಿದ್ದು ಇದನ್ನು ನೋಡಿದ ಸ್ಥಳೀಯ ಯುವಕರು ಮಹಿಳೆಯ ತಲೆ ಕೂದಲನ್ನು ಹಿಡಿದು ಎಳೆದು ರಕ್ಷಣೆ ಮಾಡಿದ್ದಾರೆ. ಬಳಿಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಗೆ ಬೆಳ್ತಂಗಡಿ ಪೊಲೀಸರು ಆಗಮಿಸಿ ವಿಚಾರಣೆ ನಡೆಸಿದ್ದಾರೆ.

- Advertisement -

Latest News

error: Content is protected !!