Wednesday, June 24, 2026
Homeಕರಾವಳಿಮಂಗಳೂರುವಿಟ್ಲ: ರೌಡಿಶೀಟರ್ ಅನ್ನು ಗಡಿಪಾರು ಮಾಡಿ ಆದೇಶ

ವಿಟ್ಲ: ರೌಡಿಶೀಟರ್ ಅನ್ನು ಗಡಿಪಾರು ಮಾಡಿ ಆದೇಶ

- Advertisement -
- Advertisement -

ಬಂಟ್ವಾಳ; ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೇಪು ಗ್ರಾಮದ ಬಡಕೋಡಿ ಮನೆಯ  ಗಣೇಶ್ @ ಗಣೇಶ ಪೂಜಾರಿ ಎಂಬಾತನ ಮೇಲೆ ಹಲ್ಲೆ, ದೊಂಬಿ, ಕೊಲೆ ಯತ್ನ, ಜೂಜು, ಸರಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಯಂತಹ ಒಟ್ಟು 14 ಪ್ರಕರಣಗಳು ದಾಖಲಾಗಿದ್ದು, ಈತನನ್ನು ವಿಟ್ಲ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ವರದಿಯ ಮೇರೆಗೆ ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿ, ಮಂಗಳೂರು ರವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಹಾಸನ ಜಿಲ್ಲೆಯ ಆಲೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿರುತ್ತಾರೆ. ಸಹಾಯಕ ಆಯುಕ್ತರ ಆದೇಶದಂತೆ ಗಣೇಶ್ ನನ್ನು  ಸುರಕ್ಷಿತವಾಗಿ ಆಲೂರು ಪೊಲೀಸ್‌ ಠಾಣೆಗೆ ಕಳುಹಿಸಲಾಗಿದೆ.

- Advertisement -

Latest News

error: Content is protected !!