- Advertisement -
![]()
- Advertisement -
ಉಡುಪಿ; ಏಕಾಏಕಿ ಕಾರು ರಿವರ್ಸ್ ಹೋಗಿ ಹಲವು ವಾಹನಗಳಿಗೆ ಡಿಕ್ಕಿ ಹೊಡದ ಘಟನೆ ಉಡುಪಿಯ ಜಾಮಿಯ ಮಸೀದಿ ಬಳಿ ನಡೆದಿದೆ.
ಕಟ್ಟಡವೊದರ ಮುಂಭಾಗದಲ್ಲಿ ಕಾರನ್ನು ಪಾರ್ಕ್ ಮಾಡಲಾಗಿತ್ತು. ಕಾರಿನ ಮಾಲೀಕ ಬಂದು ಕಾರಿನೊಳಗೆ ಕುಳಿತುಕೊಂಡಿದ್ದಾರೆ. ಆಟೋಮೆಟಿಕ್ ಕಾರು ಇದಾಗಿದ್ದು, ಏಕಾಏಕಿ ಎಕ್ಸಲೇಟರ್ ಕೊಟ್ಟಿದ್ದರಿಂದ ಕಾರು ನಿಯಂತ್ರಣ ತಪ್ಪಿ ಹಿಂಬದಿಯಲ್ಲಿ ಬರುತ್ತಿದ್ದ ಬೈಕ್ ಆಟೋ ರಿಕ್ಷಾ ಮತ್ತು ಪಾದಾಚಾರಿಗೆ ಗುದ್ದಿದೆ. ಗಾಯಕ್ಕೊಳಗಾದ ದ್ವಿಚಕ್ರ ವಾಹನ ಸವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಟೋ ಚಾಲಕ ಮತ್ತು ಪಾದ ಚಾರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
- Advertisement -


