ಬೆಳ್ತಂಗಡಿ : ಪಾರ್ಕಿಂಗ್ ಜಾಗದಲ್ಲಿ ಬಿದ್ದಿರುವ ಮೂರು ಉಂಗುರು ನಡೆದುಕೊಂಡು ಹೋಗುತ್ತಿದ್ದ ದಂಪತಿಗಳಿಗೆ ಪತ್ತೆಯಾಗಿದ್ದು. ಈ ಉಂಗುರಗಳನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಿದ್ದಾರೆ.

ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿರುವ ಸಮಡೈನ್ ಹೊಟೇಲ್ ಮೇಲ್ಭಾಗದಲ್ಲಿರುವ ಮಾತೃಶ್ರೀ ಬಟ್ಟೆ ಅಂಗಡಿಗೆ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮ ಆಡಳಿತಾಧಿಕಾರಿ ಸಿದ್ದೇಶ್.ಟಿ ಮತ್ತು ಪತ್ನಿ ಐಶ್ವರ್ಯ ಬಟ್ಟೆ ಖರೀದಿಸಲು ಡಿ.27 ರಂದು ಸಂಜೆ ಹೋಗಿ ವಾಪಸ್ ಬಂದು ಸಮಡೈನ್ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಕಾರನ್ನು ಹತ್ತುವ ಸಮಯದಲ್ಲಿ ಮೂರು ಚಿನ್ನದ ಕೈ ಉಂಗುರ ಬಿದ್ದಿರುವುದನ್ನು ಸಿದ್ದೇಶ್ ಪತ್ನಿ ಐಶ್ವರ್ಯ ನೋಡಿ ಅದು ಚಿನ್ನದ ಉಂಗುರ ಎಂದು ಖಚಿತವಾದ ಬಳಿಕ ನೇರ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದು ವಾರಸುದಾರರನ್ನು ಪತ್ತೆ ಮಾಡಿ ನೀಡುವಂತೆ ಚಿನ್ನದ ಉಂಗುರಗಳನ್ನು ಹಸ್ತಾಂತರ ಮಾಡಿ ಮಾನವೀಯತೆ ಮೆರೆದಿದ್ದಾರೆ. ಈ ಮೂರು ಚಿನ್ನದ ಉಂಗುರಾದ ವಾರಸುದಾರರು ಪತ್ತೆಯಾದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದು ಚಿನ್ನದ ಉಂಗುರಗಳ ಸೂಕ್ತ ದಾಖಲೆಗಳನ್ನು ನೀಡಿ ಪಡೆದುಕೊಳ್ಳಬೇಕಾಗಿ ಬೆಳ್ತಂಗಡಿ ಪೊಲೀಸರು ತಿಳಿಸಿದ್ದಾರೆ.


