ಬೆಳ್ತಂಗಡಿ: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಪ್ರಕರಣದಲ್ಲಿ ಎಸ್.ಐ.ಟಿ ನ್ಯಾಯಾಲಯದಲ್ಲಿ ಸಲ್ಲಿಸಿರುವ ವರದಿಯ ಕೆಲ ಪುಟಗಳು ಕೊನೆಗೂ ಹೋರಾಟಗಾರ ಜಯಂತ್.ಟಿ ಅವರ ಕೈ ಸೇರಿದೆ. ವರದಿಯಲ್ಲಿ ಚಿನ್ನಯ್ಯ ಹೇಳಿಕೆ ಹಾಗೂ ಕೆಲವು ಗೌಪ್ಯ ಮಾಹಿತಿಗಳ ಪ್ರತಿಗಳನ್ನು ನ್ಯಾಯಾಲಯ ನೀಡಿಲ್ಲ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿದ ಬಗ್ಗೆ ಹಲವು ಮಂದಿಯ ಹೇಳಿಕೆಯಲ್ಲಿ ದಾಖಲಾಗಿದ್ದು, ಸೂತ್ರಧಾರಿಗಳಾದ ಜಯಂತ್. ಟಿ, ಗಿರೀಶ್ ಮಟ್ಟಣ್ಣವರ್,ವಿಠಲ್ ಗೌಡ, ಮಹೇಶ್ ಶೆಟ್ಟಿ ತಿಮರೋಡಿ ಸೇರಿಕೊಂಡು ಚಿನ್ನಯ್ಯ ಮತ್ತು ಸುಜಾತ ಭಟ್ ಇಬ್ಬರನ್ನು ಮುಂದೆ ಹಾಕಿಕೊಂಡು ಷಡ್ಯಂತ್ರ ಮತ್ತು ಅಪಪ್ರಚಾರ ಮಾಡಿರುವುದು ಬಯಲಾಗಿದೆ. ಈ ವರದಿಯ ಪ್ರತಿ ಮಹಾಎಕ್ಸ್ ಪ್ರೆಸ್ ವೆಬ್ ಸೈಟಿಗೆ ಲಭ್ಯವಾಗಿದೆ.

ಬೆಳ್ತಂಗಡಿ ಎಸ್.ಐ.ಟಿ ಅಧಿಕಾರಿಗಳು 3,923 ಪುಟಗಳ ವರದಿಯನ್ನು ಸಲ್ಲಿಸಿದ್ದು ಇದರಲ್ಲಿ 1,100 ಪುಟಗಳನ್ನು ನ್ಯಾಯಾಲಯ ಜಯಂತ್.ಟಿ ಅವರಿಗೆ ಡಿ.26 ರಂದು ನೀಡಿದೆ.ಎಸ್.ಐ.ಟಿ ಸಲ್ಲಿಸಿರುವ ವರದಿಯನ್ನು ಬಹಿರಂಗಗೊಳಿಸದಂತೆ ನ್ಯಾಯಾಲಯದಲ್ಲಿ ಕೇಳಿಕೊಂಡಿತ್ತು. ಎಸ್.ಐ.ಟಿ ವರದಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿಯ ವಿರುದ್ದ ಕ್ರಮ ಕೈಗೊಳ್ಳಲು ಅವಕಾಶ ಕೋರಿ ನ್ಯಾಯಾಲಯಕ್ಕೆ ನ.20 ರಂದು ವರದಿ ಸಲ್ಲಿಸಿದ್ದರು.ಇದೀಗ ವರದಿಯ ಕೆಲ ಪ್ರತಿಗಳು ಪಡೆದುಕೊಂಡಿದ್ದಾರೆ.
ಎಸ್ಐಟಿ ಸಲ್ಲಿಸಿದ ವರದಿಯಲ್ಲಿ ಜಯಂತ್.ಟಿ, ಚಿನ್ನಯ್ಯನ ಪತ್ನಿ ಮಲ್ಲಿಕಾ , ಚಿನ್ನಯ್ಯ ಸಹೋದರಿ ರತ್ನ, ಗಣೇಶ್ ಶೆಟ್ಟಿ,ವಿಠಲ್ ಗೌಡ, ಪ್ರದೀಪ್ ಕುಲಾಲ್, ಪುರುಷೋತ್ತಮ, ಗಿರೀಶ್ ಮಟ್ಟಣ್ಣವರ್, ಯೂಟ್ಯೂಬರ್ ಅಭಿಷೇಕ್ ಸೇರಿದಂತೆ ಹಲವು ಮಂದಿಯ ಸ್ವಿಇಚ್ಚಾ ಹೇಳಿಕೆಗಳನ್ನು ಎಸ್ಐಟಿ ಮುಂದೆ ದಾಖಲಿಸಲಾಗಿತ್ತು. ಧರ್ಮಸ್ಥಳ ಕ್ಷೇತ್ರದ ,ಧರ್ಮಾಕಾರಿಗಳು ,ಅವರ ಸಹೋದರ ವಿರುದ್ಧ ಸೂತ್ರಧಾರಿಗಳು ಸುಳ್ಳು ಹೇಳಿಕೆಗಳನ್ನು ಚಿನ್ನಯ್ಯನ ಮೂಲಕ ಒತ್ತಡ ಹೇರಿ ಹೇಳಿಸಿರುವ ಒಟ್ಟು 1100 ಪ್ರತಿಗಳು ಲಭ್ಯವಾಗಿದೆ.

ಚಿನ್ನಯ್ಯನನ್ನು ತಿಮರೋಡಿಗೆ ಭೇಟಿ ಮಾಡಿಸಿದ್ದು ವಿಠಲ್ ಗೌಡ: ಚಿನ್ನಯ್ಯ ಉಜಿರೆಯಲ್ಲಿರುವ ಸಮಯದಲ್ಲಿ ಮೊದಲ ಭಾರಿಗೆ ಸೌಜನ್ಯ ಮಾವ ವಿಠಲ್ ಗೌಡ ಕಾರಿನಲ್ಲಿ ಚಿನ್ನಯ್ಯನನ್ನು ಮತ್ತು ಪತ್ನಿ ಮಲ್ಲಿಕಾಳನ್ನು ತಿಮರೋಡಿ ಮನೆಗೆ ಕರೆದುಕೊಂಡು ಹೋಗಿ ಮಾತಾನಾಡಿಸಿರುವುದು ಎಂದು ಮಲ್ಲಿಕಾ ಹೇಳಿಕೆಯಲ್ಲಿದೆ.

ಮಹೇಶ್ ಶೆಟ್ಟಿ ಮೇಲೆ ದಾಳಿ ಮಾಡಲು ಮುಂದಾಗಿದ್ದ ಚಿನ್ನಯ್ಯ: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿರುವಾಗ ಸೂತ್ರಧಾರಿಗಳ ಒತ್ತಡಕ್ಕೆ ಒಳಗಾಗಿ ನೊಂದ ಚಿನ್ನಯ್ಯ ಕೋಪಗೊಂಡು ತಿಮರೋಡಿ ವಿರುದ್ಧ ತಿರು ಬಿದ್ದು ಗಲಾಟೆ ಮಾಡಿ ತಿಮರೋಡಿ ಮೇಲೆ ಕತ್ತಿ ಎತ್ತಿಕೊಂಡು ಹಲ್ಲೆಗೆ ಮುಂದಾಗಿದ್ದ ಎಂದು ಪ್ರತ್ಯಕ್ಷವಾಗಿ ಘಟನೆ ನೋಡಿದ ತಿಮರೋಡಿ ಆಪ್ತ ಗಣೇಶ್ ಶೆಟ್ಟಿಯ ಎಸ್ಐಟಿ ಮುಂದೆ ನೀಡಿದ ಸ್ವಇಚ್ಚಾ ಹೇಳಿಕೆಯಲ್ಲಿದೆ.
ಎರಡು ಲಕ್ಷ ನೀಡಿದ್ದ ಮಟ್ಟಣ್ಣವರ್: ಚಿನ್ನಯ್ಯ ತಿಮರೋಡಿ ಮನೆಯಲ್ಲಿರುವಾಗ ಗಿರೀಶ್ ಮಟ್ಟಣ್ಣವರ್ ಮಲ್ಲಿಕಾ ಆಳಿಯ ಪುರುಷೋತ್ತಮನನ್ನು ತಿಮರೋಡಿ ಮನೆಗೆ ಕರೆಸಿ 2 ಲಕ್ಷ ಹಣವನ್ನು ನೀಡಿದ್ದು. ಆ ಹಣವನ್ನು ಮಲ್ಲಿಕಾ ಚೀಟಿ ಹಣವನ್ನು ಕಟ್ಟಿ ತೀರಿಸಿದ್ದಾಳೆ ಎಂದು ಹೇಳಿಕೆಯಲ್ಲಿದೆ.

ಧರ್ಮಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಚಿನ್ನಯ್ಯನ ಪತ್ನಿ ಹಾಗೂ ಸಹೋದರಿ ಹೇಳಿಕೆಯಲ್ಲಿ ಧರ್ಮಸ್ಥಳ ಕ್ಷೇತ್ರದವರು ಯಾವುದೇ ತಪ್ಪು ಕೆಲಸ ಮಾಡಿಲ್ಲ ಆದ್ರೆ ಬುರುಡೆ ಸೂತ್ರಧಾರಿಗಳು ಚಿನ್ನಯ್ಯ ಮೂಲಕ ಸುಳ್ಳು ಹೇಳಿಕೆ ಕೊಡಿಸಿದ್ದಾರೆ ಎಂದು ಹೇಳಿಕೆಯಲ್ಲಿದೆ. ಬುರುಡೆ ಷಡ್ಯಂತ್ರ ಸೂತ್ರಧಾರಿಗಳ ಹೇಳಿಕೆಗಳಲ್ಲಿ ಸ್ಪಷ್ಟವಾಗಿ ಷಡ್ಯಂತ್ರದ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ.


