ಸುಳ್ಯ: ಕೊಲ್ಲಮೊಗ್ರುವಿನಲ್ಲಿ ಅಪರಿಚಿತರಿಂದ ಮಕ್ಕಳ ವಿಚಾರಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವದಂತಿಗಳಿಗೆ ಪೊಲೀಸರು ತೆರೆ ಎಳೆದಿದ್ದಾರೆ.
ಕೆಲ ದಿನಗಳ ಹಿಂದೆ ಬೈಕ್ ನಲ್ಲಿ ಬಂದ ಅಪರಿಚಿತರು ಮಕ್ಕಳನ್ನು ತಡೆದು ವಿಚಾರಿಸಿದ್ದರು. ಇದು ಮಕ್ಕಳಲ್ಲಿ ಅಪಹರಣ ಎಂಬ ಬಗ್ಗೆ ಭಯ ಉಂಟಾಗಿತ್ತು. ಪೊಲೀಸರು ತನಿಖೆ ನಡೆಸಿದ್ದು, ಸ್ಕೂಟರ್ ನಲ್ಲಿ ಬಂದಿದ್ದ ವ್ಯಕ್ತಿಗಳನ್ನು ಪತ್ತೆ ಮಾಡಿದ್ದಾರೆ.
ಪುತ್ತೂರು ಕಂಪೆನಿಯೊಂದರ ಕೆಲಸಗಾರರಾಗಿದ್ದು, ಹೊಸ ಟಿವಿ ಅಳವಡಿಸಲು ಕೊಲ್ಲಮೊಗ್ರುವಿಗೆ ಬಂದಿದ್ದರು. ಶಾಲಾ ಮಕ್ಕಳಲ್ಲಿ ವಿಳಾಸ ಕೇಳಿದ್ದರು. ಅವರನ್ನು ಕಂಡು ಮಕ್ಕಳು ಭಯಭೀತರಾದರು. ಇದೇ ಸಂಗತಿ ವಿವಿಧ ರೀತಿಯಲ್ಲಿ ವದಂತಿಯಾಗಿ ಹರಡಿತು ಎಂಬ ಅಂಶ ತಿಳಿದುಬಂದಿದೆ. ಪೊಲೀಸರು ಆ ವ್ಯಕ್ತಿಗಳ ಹೇಳಿಕೆ ಪಡೆದಿದ್ದಾರೆ ಎನ್ನಲಾಗಿದ್ದು ಹೆಲ್ಮೆಟ್ ಕಡ್ಡಾಯವಾಗಿದ್ದ ಕಾರಣ ಕೊಲ್ಲಮೊಗ್ರುವಿಗೆ ಇಬ್ಬರೂ ಹೆಲ್ಮೆಟ್ ಧರಿಸಿಯೇ ಬಂದಿದ್ದರು. ಚರ್ಮದ ಸಮಸ್ಯೆ ಕಾರಣದಿಂದ ಒಬ್ಬರು ಮುಖ ಗವಸು ಹಾಕಿದ್ದರು ಎಂದು ತಿಳಿದುಬಂದಿದೆ


