
ಮಂಗಳೂರು; ಇನ್ಸ್ ಸ್ಟಾ ಗ್ರಾಮ್ ಪೇಜ್ ನಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಕಾಟಿಪಾಳ್ಯ ನಿವಾಸಿ ಅಭಿಷೇಕ್ ಎಂ (23) ಬಂಧಿತ ಆರೋಪಿ.
mr_a_titude ৯০৯ Instagram Hotel Nisarga 20 ಅದರ ಮೇಲೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕೊಲೆ ಪ್ರಕರಣದ ಆರೋಪಿತರಿಗೆ ಬಜಪೆ ಪೊಲೀಸರಿಂದ ರಾಜ ಅತಿಥ್ಯ, ದಿನಾಲೂ ನಿಸರ್ಗ ಹೋಟೆಲ್ ಬಜಪೆ ಇಂದ ಬೀಫ್ ಊಟವನ್ನು ನೀಡುತ್ತಿದ್ದಾರೆ… ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸ್ ಇಲಾಖೆ ಅಪರಾಧಿಗಳೊಟ್ಟಿಗೆ ಸೇರಿಕೊಂಡು ಪೂರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದ್ದಾರೆ. ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಇಲ್ಲಿ ಪೊಲೀಸ್ ನವರ ಮೇಲೆ ಇಟ್ಟಿರುವ ಭರವಸೆ ಸುಳ್ಳಾಗುತ್ತಿದೆ. ಎಂಬುದಾಗಿ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ದಿನಾಂಕ: 08-05-2025 ರಂದು ರಂದು ಮಂಗಳೂರು ನಗರದ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ನಗರದ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕೈಗೊಳ್ಳಲಾಗಿರುತ್ತದೆ.
ಆರೋಪಿತನ ವಿರುದ್ದ ಈ ಹಿಂದೆ ಕೊಲೆ, ಕೊಲೆಯತ್ನ, ಹಲ್ಲೆ, ದರೋಡೆ ಸೇರಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ -3, ಕಾಪು ಪೊಲೀಸ್ ಠಾಣೆಯಲ್ಲಿ -1 ಪ್ರಕರಣಗಳು ಸಹ ದಾಖಲಾಗಿರುತ್ತದೆ.
1. ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ.11/2021 ಕೊಲೆಯತ್ನ ಪ್ರಕರಣ.
2. ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ.137/2021 ಹಲ್ಲೆ ಪ್ರಕರಣ.
3. ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ.62/2022 ಕೊಲೆ ಪ್ರಕರಣ.
4. ಕಾವು ಪೊಲೀಸ್ ಠಾಣಾ ಅ.ಕ್ರ.62/2024 ದರೋಡೆ ಪ್ರಕರಣ,
ಪ್ರಕರಣದಲ್ಲಿ mr_a_titude ಎಂಬ Instagram ಪೇಜ್ ನಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಡುತ್ತಿದ್ದ ಆರೋಪಿತನನ್ನು ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ತಾಂತ್ರಿಕ ಸಾಕ್ಷ್ಯಗಳ ಮುಖಾಂತರ ಪತ್ತೆ ಮಾಡಿ, ದಸ್ತಗಿರಿ ಕ್ರಮ ಜರುಗಿಸಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ.


