ಬೆಳ್ತಂಗಡಿ : ಮೂರು ತಿಂಗಳ ಹಿಂದೆ ರಾಜ್ಯ ಸರಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರನ ಸಮಸ್ಯೆಯಿಂದ ಡಿ.17 ರಂದು ಬಂದ್ ಮಾಡಲಾಗಿತ್ತು. ಇದೀಗ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ನಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಮಧ್ಯಾಹ್ನ ಮತ್ತೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಧ್ಯಪ್ರವೇಶ ಮಾಡಿ ಓಪನ್ ಮಾಡುವಂತಾಗಿದೆ.
ಗುತ್ತಿಗೆದಾರ ಸಮರ್ಪಕವಾಗಿ ದಾಖಲೆಗಳನ್ನು ಸರಕಾರಕ್ಕೆ ನೀಡದೆ ಆತನಿಗೆ ಹಣ ಸಂದಾಯವಾಗಿರಲ್ಲಿಲ್ಲ ಈ ಕಾರಣದಿಂದ ಗುತ್ತಿಗೆದಾರ ಡಿ.17 ರಂದು ಬಂದ್ ಮಾಡಿ ಹೋಗಿದ್ದ ಬಗ್ಗೆ ಮಹಾ ಎಕ್ಸ್ ಪ್ರೆಸ್ ವೆಬ್ ಸೈಟ್ “ಇಂದಿರಾ ಕ್ಯಾಂಟೀನ್ ಮೂರೇ ತಿಂಗಳಿಗೆ ಬಂದ್” ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಸಾರ ಮಾಡಿತ್ತು.
ಈ ವರದಿ ನೋಡಿ ಬಗ್ಗೆ ರಕ್ಷಿತ್ ಶಿವರಾಂ ಉಸ್ತುವಾರಿ ಸಚಿವರ ಜೊತೆ ಮಾತುಕತೆ ನಡೆಸಿ ಬಳಿಕ ಗುತ್ತಿಗೆದಾರನಿಗೆ ಸೂಚನೆ ನೀಡಿದ ಮೇರೆಗೆ ಮತ್ತೆ ಇಂದಿರಾ ಕ್ಯಾಂಟೀನ್ ಮಧ್ಯಾಹ್ನ ಓಪನ್ ಮಾಡಿ ಜನರಿಗೆ ಉಪಹಾರ ನೀಡುವ ಕಾರ್ಯಕ್ಕೆ ಮುಂದಾಗಿದೆ.


