ಉಡುಪಿ; ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಅವರು ಬ್ರಹ್ಮಾವರ ರಾಜಾರಾಮ್ ಭಟ್ ಎಂಬುವರ ಜೊತೆ ವೈವಾಹಿತ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗೀತಾ ಭಾರತಿ ಭಟ್ `ಅಂಬಿನಿಂಗ್ ವಯಸ್ಸಾಯ್ತೋ’ ಸಿನಿಮಾ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಪೋಷಕ ಪಾತ್ರದಲ್ಲಿ ಕಾಣಿಸ್ಕೊಂಡಿದ್ದರು. ಆದರೆ ಸಿನಿಮಾಗಳಿಗಿಂತ ಕಿರುತೆರೆಯಲ್ಲೇ ಗೀತಾ ಭಾರತಿ ಭಟ್ ಹೆಚ್ಚು ಜನಪ್ರಿಯರು. ನಟಿಯಾಗಿ, ರಂಗಭೂಮಿ ಕಲಾವಿದೆಯಾಗಿ. ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ..
ಸಂಪ್ರದಾಯಸ್ಥ ಮಧ್ಯಮ ಕುಟುಂಬದಲ್ಲಿ ಬೆಳೆದ ಗೀತಾ ಭಾರತಿ ಭಟ್ ಅಭಿನಯದಲ್ಲಿ ಚತುರೆ. ಇದೀಗ ಗೀತಾ ಭಾರತಿ ಭಟ್ ಮದುವೆಗೆ ಅವರ ಸೀರಿಯಲ್ ಬಳಗದ ಆಪ್ತವರ್ಗ ಸಾಕ್ಷಿಯಾಗಿತ್ತು. ಮದುವೆಯ ಬಳಿಕವೂ ಗೀತಾ ಭಾರತಿ ಭಟ್ ಸಿನಿಮಾ, ಸೀರಿಯಲ್ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ.
ಅಂದಹಾಗೆ ಗೀತಾ ಭಾರತಿ ಭಟ್ ಅವರು ಬ್ರಹ್ಮಾವರ ರಾಜಾರಾಮ್ ಭಟ್ ಅವರನ್ನು ಮದುವೆಯಾಗಿದ್ದಾರೆ. ಆದರೆ ನಿಜಕ್ಕೂ ರಾಜಾರಾಮ್ ಭಟ್ ಯಾರು, ವೃತ್ತಿ ಏನು ಎಂಬ ಬಗ್ಗೆ ಮಾಹುತಿ ಇಲ್ಲ. ಅರೇಂಜ್ ಮ್ಯಾರೇಜ್? ಲವ್ ಮ್ಯಾರೇಜ್? ಎಂಬ ಬಗ್ಗೆ ಮಾಹಿತಿ ಇಲ್ಲ. ಮದುವೆ ಎಲ್ಲಿ ನಡೆದಿದೆ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ.


