Friday, June 5, 2026
Homeಕರಾವಳಿಮಂಗಳೂರುಮಂಗಳೂರು : ಮ್ಯಾಟ್ರೋಮೋನಿ ಮೂಲಕ ಪರಿಚಯವಾಗಿ ಮಂಗಳೂರಿನ ಯುವಕನೊಂದಿಗೆ ಮದುವೆ; ಒಂಭತ್ತೇ ತಿಂಗಳಿಗೆ ಹೆಂಡತಿಯ 6...

ಮಂಗಳೂರು : ಮ್ಯಾಟ್ರೋಮೋನಿ ಮೂಲಕ ಪರಿಚಯವಾಗಿ ಮಂಗಳೂರಿನ ಯುವಕನೊಂದಿಗೆ ಮದುವೆ; ಒಂಭತ್ತೇ ತಿಂಗಳಿಗೆ ಹೆಂಡತಿಯ 6 ಲಕ್ಷಕ್ಕೂ ಅಧಿಕ ಹಣದೊಂದಿಗೆ ಪರಾರಿ

- Advertisement -
- Advertisement -

ಮಂಗಳೂರು : ಮ್ಯಾಟ್ರೋಮೋನಿ ಮೂಲಕ ಪರಿಚಯವಾಗಿ ಯುವತಿಯೊಬ್ಬರನ್ನು ಮದುವೆಯಾಗಿ ಒಂಭತ್ತೇ ತಿಂಗಳಿಗೆ ಹೆಂಡತಿಯ 6 ಲಕ್ಷಕ್ಕೂ ಅಧಿಕ ಹಣದೊಂದಿಗೆ ಮಂಗಳೂರು ಮೂಲದ ಯುವಕನೊಬ್ಬ ಪರಾರಿಯಾದ ಘಟನೆ ನಡೆದಿದೆ. ಶುಶಾಂಕ್ ಅಂಕುಶ್ ಪೂಜಾರಿ ಪರಾರಿಯಾದ ಯುವಕ.

ಆರೋಪಿ ಶುಶಾಂಕ್ ಅಂಕುಶ್ ಪೂಜಾರಿ ಎಂಬ ವ್ಯಕ್ತಿಯನ್ನು ಮ್ಯಾಟ್ರಿಮೋನಿ ಮೂಲಕ ಮಹಾರಾಷ್ಟ್ರದ ಘನಸೋಳಿಯ ನವ ಮುಂಬೈ ನಲ್ಲಿ 02/02/2025 ರಲ್ಲಿ ಯುವತಿಯೊಬ್ಬರನ್ನು ಮದುವೆಯಾಗಿದ್ದ. ಬಳಿಕ ನವೆಂಬರ್ 15 ರಂದು ಶುಶಾಂಜ್ ಅಂಕುಶ್ ಪೂಜಾರಿ ನಾಪತ್ತೆಯಾಗಿದ್ದು, ಈ ಹಿನ್ನಲೆ ಯುವತಿ ಮಹಾರಾಷ್ಟ್ರದ ರಬಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.  ನಂತರ ದಿನಗಳಲ್ಲಿ ಶುಶಾಂತ್ ಅಂಕುಶ್ ಪೂಜಾರಿ ರವರು ವಂಚನೆ ಮಾಡಿದ ಬಗ್ಗೆ ಅನುಮಾನಗೊಂಡು ಯುವತಿ ಶುಶಾಂತ್ ಅಂಕುಶ್ ಪೂಜಾರಿ ರವರ ಈಮೇಲ್ ಪರಿಶೀಲನೆ ಮಾಡಿದ್ದಾರೆ. ಆ ವೇಳೆ ಅವರು Instagram ಖಾತೆಯನ್ನು 19 ನವೆಂಬರ್ 2025 ರಂದು ಬಳಸಿರುವ, ನಾಪತ್ತೆಯಾದ ನಂತರ ಅವರು ಹೊಸ ಮ್ಯಾಟ್ರಿಮೋನಿಯಲ್ ಪ್ರೊಫೈಲ್ಗಳನ್ನು ಸೃಷ್ಟಿಸಿರುವುದು, ಒಂದೇ ಸಂಖ್ಯೆಯ ಎರಡು UIDAI ಕಾರ್ಡ್ಗಳು, ಎರಡು PAN ಕಾರ್ಡ್ಗಳು ಮತ್ತು ಒಂದು ಚಾಲನಾ ಪರವಾನಗಿ ಹೊಂದಿದ್ದು, ಹೆಸರು ಮಾತ್ರ ಬದಲಾಯಿಸಿರುವುದು ಗಮನಕ್ಕೆ ಬಂದಿದೆ.

ಅಲ್ಲದೇ  ಶುಶಾಂಕ್ ಯುವತಿಯ ಗಮನಕ್ಕೆ ತರದೆ ಅವರ ವೈಯಕ್ತಿಕ ದಾಖಲೆಗಳನ್ನು ದುರುಪಯೋಗ ಪಡಿಸಿಕೊಂಡು ಅವರ ಬ್ಯಾಂಕ್ ಖಾತೆಗಳಿಂದ ಹಾಗೂ ಮೋಬೈಲ್ ನಿಂದ ಸುಮಾರು 6,60,000/- ಗಳನ್ನು ತೆಗೆದುಕೊಂಡಿದ್ದಾನೆ. ಅಲ್ಲದೆ ಮುಂಬೈನ ಮಹಿಳೆಯನ್ನು ಯುವತಿಯನ್ನು ಮದುವೆಯಾಗುವ ಮೊದಲು ಶುಶಾಂತ್ ಅಂಕುಶ್ ಪೂಜಾರಿ ಮಂಗಳೂರಿನಲ್ಲಿ ಈಗಾಗಲೇ ಮದುವೆಯಾದವರಾಗಿದ್ದಾರೆ ಎಂಬುದು ಅವರಿಗೆ ಇತ್ತೀಚೆಗೆ ತಿಳಿದು ಬಂದಿದೆ. ಹೀಗೆ ಮದುವೆ ಆಗುವ ಭರವಸೆಯ ಹೆಸರಿನಲ್ಲಿ ಹಲವು ಮಹಿಳೆಯರಿಂದ ಹಣ ಪಡೆಯುವ ಮೂಲಕ ವಂಚನೆ ಮಾಡಿದ್ದಾರೆ.ಹಾಗೂ ಮುಂಬೈ ಮತ್ತು ಮಂಗಳೂರಿನಲ್ಲಿ ಅವರ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾದ ಬಗ್ಗೆ ಮಾಹಿತಿ ಬಂದಿರುತ್ತದೆ.ಆದ್ದರಿಂದ ಪಿರ್ಯಾದಿದಾರರನ್ನು ನಕಲಿ ಹೆಸರಿನಲ್ಲಿ ಮ್ಯಾಟ್ರಮೋನಿ ಮೂಲಕ ಮದುವೆಯಾಗಿ ಅವರ ಮತ್ತು ಅವರ ಮನೆಯವರ ಎಲ್ಲಾ ವೈಯಕ್ತಿಕ ದಾಖಲಾತಿಗಳನ್ನು ಬಳಸಿ ದುರುಪಯೋಗ ಮಾಡಿ, ಯುವತಿಯಿಂದ ಹಣವನ್ನು ಪಡೆದುಕೊಂಡು ಮೋಸ ಮಾಡಿ,ಹಾಗೂ ಇದೇ ತರಹ ಹಲವು ಹೆಣ್ಣು ಮಕ್ಕಳನ್ನು ಮದುವೆಯಾಗಿ ಮತ್ತು ಮದುವೆಯಾಗುವುದಾಗಿ ನಂಬಿಸಿ ಅವರಿಂದ ಹಣವನ್ನು ಪಡೆದುಕೊಂಡು ನಂಬಿಕೆ ದ್ರೋಹ ಮಾಡಿ ಶುಶಾಂಕ್ ಅಂಕುಶ್ ಪೂಜಾರಿ ಎಂಬ ಹೆಸರಿನ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Latest News

error: Content is protected !!