- Advertisement -
![]()
- Advertisement -
ಮಂಗಳೂರು; ದೈವದ ಅಗೇಲಿನ ಊಟದ ವೇಳೆ ಮಹಿಳೆಯ ಗಂಟಲಲ್ಲಿ ಕೋಳಿಯ ಮಾಂಸದ ಮೂಳೆ ಸಿಕ್ಕಿ ಹಾಕಿಕೊಂಡು ಕೊನೆಗೆ ಸಕಾಲಕ್ಕೆ ಚಿಕಿತ್ಸೆ ನೀಡಿ ವೈದ್ಯರು ಮಹಿಳೆಯ ಜೀವ ಉಳಿಸಿದ ಘಟನೆ ಮುಲ್ಕಿಯಲ್ಲಿ ನಡೆದಿದೆ.
ಗುರುವಾರ, ದೈವದ ಅಗೇಲು ಸಂದರ್ಭದಲ್ಲಿ ಹುಣೆಕಟ್ಟೆ ನಿವಾಸಿ ಮಹಿಳೆ ಕೋಳಿ ಊಟ ಮಾಡುವಾಗ ದೊಡ್ಡ ಗಾತ್ರದ ಮಾಂಸದೊಟ್ಟಿಗೆ ಎಲುಬನ್ನು ನುಂಗಿದ್ದಾರೆ. ಅದು ಕುತ್ತಿಗೆಗಿಂತಲೂ ಕೆಳಗೆ ಗಂಟಲಲ್ಲಿ ಸಿಲುಕಿಕೊಂಡಿದೆ. ಮಹಿಳೆ ಸುಮಾರು ಗಂಟೆಗಳ ಕಾಲ ಒದ್ದಾಡಿದಾರೆ. ಕೊನೆಗೆ ಕಟೀಲು ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಗೆ ಬಂದು ತಜ್ಞ ಹಿರಿಯ ವೈದ್ಯ ಡಾ. ಉನ್ನಿಕೃಷ್ಣ ನಾಯನಾರ್ ಸಂದರ್ಶಿಸಿದಾಗ ಸ್ಕ್ಯಾನ್ ಮಾಡಿಸಲು ಸಲಹೆ ಕೊಟ್ಟಿದ್ದಾರೆ. ಆದರೆ ಸ್ಕ್ಯಾನ್ ಮಾಡಿಸಲು ಹಣದ ತೊಂದರೆ ಇದ್ದ ಕಾರಣ ಎಕ್ಸರೇ ಮಾಡಿಸಿ ಅತ್ಯಾಧುನಿಕ ಉಪಕರಣದಿಂದ ಕುತ್ತಿಗೆಗಿಂತಲೂ ಕೆಳಜಾರಿದ ಕೋಳಿ ಎಲುಬನ್ನು ಬಹಳ ಯಶಸ್ವಿಯಾಗಿ ಹೊರ ತೆಗೆದು ಜೀವ ಉಳಿಸಿದ್ದಾರೆ.
- Advertisement -


