- Advertisement -
![]()
- Advertisement -
ಚಿಕ್ಕಮಗಳೂರು; ಇಲ್ಲಿನ ಅರೆನೂರಿನಲ್ಲಿ ಗೃಹಿಣಿ ಸಂಧ್ಯಾರನ್ನು ಕೊಂದಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಸಂಧ್ಯಾ ಅವರ ಸ್ವಂತ ಅತ್ತೆ ಮಗ ಜನಾರ್ದನ ಬಂಧಿತ ಆರೋಪಿ.
ಎರಡು ದಿನಗಳ ಹಿಂದೆ ಅರೆನೂರಿನಲ್ಲಿ ಸಂಧ್ಯಾ(33) ಎಂಬ ಮಹಿಳೆಯನ್ನು ಜನಾರ್ದನ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಗಂಡನನ್ನು ಬಿಟ್ಟಿದ್ದ ಸಂಧ್ಯಾ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದರು. ಸಂಧ್ಯಾರಿಗೆ ತನ್ನ ಜೊತೆ ಸಂಬಂಧ ಇಟ್ಕೋ ಅಂತಾ ಜನಾರ್ದನ ನಿರಂತರ ಹಿಂಸೆ ನೀಡುತ್ತಿದ್ದನಂತೆ. ಆದರೆ ಸಂಧ್ಯಾ ಒಪ್ಪುತ್ತಿರಲಿಲ್ಲ. ಹಾಗಾಗಿ ತನನಿಗೆ ಸಹಕಾರ ನೀಡದಕ್ಕೆ ಚಾಕುವಿನಿಂದ ಚುಚ್ಚಿ ಸಂಧ್ಯಾರನ್ನು ಜನಾರ್ದನ ಕೊಲೆ ಮಾಡಿದ್ದಾನೆ. ಕಳೆದ ೨ ದಿನದ ಹಿಂದೆ ಕೊಲೆ ಮಾಡಿ, ಜನಾರ್ದನ್ ಎಸ್ಕೇಪ್ ಆಗಿದ್ದ. ಪರಾರಿಯಾಗಿದ್ದ ಜನಾರ್ಧನನನ್ನು ಆಲ್ದೂರು ಪೊಲೀಸರು ಬಂಧಿಸಿದ್ದಾರೆ.
- Advertisement -


