- Advertisement -
![]()
- Advertisement -
ಪುತ್ತೂರು; ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಪುತ್ತೂರಿನ ಪಡೀಲ್ ನಲ್ಲಿ ನಡೆದಿದೆ. ಬದ್ರುದ್ದೀನ್ ಡಿ ಕೆ (27) ನಾಪತ್ತೆಯಾದ ಯುವಕ.
ಬದ್ರುದ್ದೀನ್ ಸುಮಾರು 8 ವರ್ಷಗಳಿಂದ ಅಬ್ದುಲ್ ರಹಿಮಾನ್ ಮಾಲೀಕತ್ವದ ಝಿಂದಗೀ ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ. ನ. 29ರಂದು ಎಂದಿನಂತೆ ಬೆಳಗ್ಗೆ 8.45ಕ್ಕೆ ಕೆಲಸಕ್ಕೆ ಹಾಜರಾಗಿದ್ದು, ಬಳಿಕ ಮಾಲೀಕರಿಗೆ ತಿಳಿಸಿ ಅಂಗಡಿಯಿಂದ ಹೋಗಿದ್ದ ಎನ್ನಲಾಗಿದೆ.
ಆ ಬಳಿಕ ಬದ್ರುದ್ದೀನ್ ಕೆಲಸದ ಸ್ಥಳಕ್ಕೂ ಹೋಗದೇ, ಮನೆಗೂ ಬಾರದೆ ಕಾಣೆಯಾಗಿರುವುದಾಗಿ ದೂರು ನೀಡಲಾಗಿದೆ. ಪುತ್ತೂರು ನಗರ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
- Advertisement -


