Saturday, June 6, 2026
Homeಕರಾವಳಿಮಂಗಳೂರುಮಂಗಳೂರು : ಬಿಲ್ ಮತ್ತು ಗುತ್ತಿಗೆ ಆದೇಶ ಮಾಡಲು ಲಂಚಕ್ಕೆ ಬೇಡಿಕೆ: ಲೋಕಾಯಕ್ತ ಬಲೆಗೆ ಮೂವರು...

ಮಂಗಳೂರು : ಬಿಲ್ ಮತ್ತು ಗುತ್ತಿಗೆ ಆದೇಶ ಮಾಡಲು ಲಂಚಕ್ಕೆ ಬೇಡಿಕೆ: ಲೋಕಾಯಕ್ತ ಬಲೆಗೆ ಮೂವರು ಭ್ರಷ್ಟ ಅಧಿಕಾರಿಗಳು

- Advertisement -
- Advertisement -

ಮಂಗಳೂರು : ಬಾಕಿಯಿರುವ ಬಿಲ್ ಮಾಡಲು ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ಮುಂದುವರಿಸಲು ನೇಮಕಾತಿ ಆದೇಶ ಮಾಡಿಸಲು ಮೂವರು ಭ್ರಷ್ಟ ಸರಕಾರಿ ಅಧಿಕಾರಿಗಳು ಒಟ್ಟು 70 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಇದರಲ್ಲಿ 30 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಮೂವರು ಅಧಿಕಾರಿಗಳು ಮಂಗಳೂರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನ.27 ರಂದು ಸಂಜೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಯು.ಪಿ.ಓ.ಆರ್ ಮಂಗಳೂರು ಹೊರಗುತ್ತಿಗೆ ನೌಕರರಾಗಿರುವ ದೂರುದಾರನ ಬಾಕಿ ಇರುವ ಸಂಬಳದ ಬಿಲ್ ಮಾಡಿಸಲು ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ಮುಂದುವರಿಸಲು ನೇಮಕಾತಿ ಆದೇಶವನ್ನು ಮಾಡಿಸಲು ಉಳ್ಳಾಲ ಸಹಾಯಕ ಭೂ ದಾಖಲೆಗಳ ನಿರ್ದೇಶಕ ಕಚೇರಿಯ ಸರ್ವೆಯರ್ ಕೃಷ್ಣ ಮೂರ್ತಿ ಇವರು 50 ಸಾವಿರ, ಮಂಗಳೂರು ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ (ADLR) ಬಿ.ಕೆ.ರಾಜು 10 ಸಾವಿರ , ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿಯ ಮಂಗಳೂರು ತಾಲೂಕು ಸರ್ವೆ ಸೂಪರ್ ವೈಸರ್ ಎಸ್.ಧನಶೇಖರ್ 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು‌. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಮೂವರ ವಿರುದ್ಧ ದೂರು ದಾಖಲಿಸಿದ್ದರು.

ಸರ್ವೇಯರ್ ಕೃಷ್ಣ ಮೂರ್ತಿ 20 ಸಾವಿರ, ಎಡಿಎಲ್ಆರ್ ರಾಜು.ಬಿ.ಕೆ 5 ಸಾವಿರ , ಸರ್ವೆ ಸುಪ್ರವೈಸರ್ ಧನಶೇಖರ್ 5 ಸಾವಿರ ಹಣವನ್ನು ನ.27 ರಂದು ಸಂಜೆ 5 ಗಂಟೆಗೆ ಲಂಚ ಸ್ವೀಕರಿಸುತ್ತಿದ್ದಾಗ ಮಂಗಳೂರು ಲೋಕಾಯುಕ್ತ ಬಲೆಗೆ ಮೂವರು ಅಧಿಕಾರಿಗಳು ಬಿದ್ದ ಅಧಿಕಾರಿಗಳು. ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಳಿಕ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಮಂಗಳೂರು ಲೋಕಾಯುಕ್ತ ಎಸ್ಪಿ (ಪ್ರಭಾರ) ಕುಮಾರ್ ಚಂದ್ರ ನೇತೃತ್ವದಲ್ಲಿ ಡಿವೈಎಸ್ಪಿ ಡಾ.ಗಾನ.ಪಿ. ಕುಮಾರ್, ಸುರೇಶ್ ಕುಮಾರ್ ಪಿ, ಇನ್ಸ್ಪೆಕ್ಟರ್ ಭಾರತಿ, ಚಂದ್ರಶೇಖರ್ ಕೆ.ಎನ್, ರವಿ ಪವಾರ್, ರಾಜೇಂದ್ರ ನಾಯ್ಕ್, ಸಿಬ್ಬಂದಿ ಮಹೇಶ್, ರಾಜಪ್ಪ, ರಾಧಾಕೃಷ್ಣ, ಆದರ್ಶ್ , ರಾಮ ನಾಯ್ಕ, ವಿವೇಕ್, ವಿನಾಯಕ, ಪ್ರವೀಣ್,ಗಂಗಣ್ಣ, ನಾಗಪ್ಪ, ಮಹಾದೇವ, ಪವಿತ್ರ, ಲಕ್ಷ್ಮಿ ದೇವಿ, ದುಂಡಪ್ಪ, ರುದ್ರಗೌಡ, ರಾಜಶೇಖರ್ , ರವಿ ಪವಾರ್ ಹಾಗೂ ಉಡುಪಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

- Advertisement -

Latest News

error: Content is protected !!