Friday, June 5, 2026
Homeಕರಾವಳಿಉಡುಪಿಕಾರ್ಕಳ; ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿ ವಿದ್ಯಾರ್ಥಿನಿ ಸಾವು

ಕಾರ್ಕಳ; ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿ ವಿದ್ಯಾರ್ಥಿನಿ ಸಾವು

- Advertisement -
- Advertisement -

ಕಾರ್ಕಳ; ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ. ಏಂಜೆಲ್‌ ಅಲ್ಫೋನ್ಸ ಜೇಮ್ಸ್‌ (17) ಸಾವನ್ನಪ್ಪಿದ ವಿದ್ಯಾರ್ಥಿನಿ.

ಏಂಜೆಲ್‌ ಅಲ್ಫೋನ್ಸ ಜೇಮ್ಸ್‌ ಮುದ್ರಾಡಿಯ ಏಂಜೆಲ್‌ ಕಾರ್ಕಳ ಕ್ರೈಸ್ಟ್ ಕಿಂಗ್‌ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ  ವ್ಯಾಸಂಗ ಮಾಡುತ್ತಿದ್ದಳು. ನ. 26ರಂದು ಸ್ಥಳೀಯ ಕ್ರೈಸ್ಟ್‌ಕಿಂಗ್‌ ಚರ್ಚ್‌ನ ವಾರ್ಷಿಕ ಹಬ್ಬವಿದ್ದ ಕಾರಣ ಕ್ರೈಸ್ಟ್ ಕಿಂಗ್‌ ವಿದ್ಯಾಸಂಸ್ಥೆಗಳಿಗೆ  ರಜೆ ಸಾರಲಾಗಿತ್ತು. ಹೀಗಾಗಿ ಏಂಜೆಲ್‌ ಮನೆಯಲ್ಲೇ ಇದ್ದಳು ಈ ಸಂದರ್ಭ ಏಕಾಏಕಿ ಆಕೆಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದ ಕಾರಣ ಹೆತ್ತವರು ಹೆಬ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ವೈದ್ಯರು ಚುಚ್ಚುಮದ್ದು ನೀಡಿದ್ದು ಬಳಿಕ ಮನೆಗೆ ಬಂದ  ಏಂಜಲ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಯಲ್ಲಿ ಮತ್ತೆ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸಪತ್ರೆಗೆ ಕೊಂಡೊಯ್ಯಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು (ಗುರುವಾರ) ಮುಂಜಾನೆ  ಏಂಜಲ್ ಇಹಲೋಕ ತ್ಯಜಿಸಿದ್ದಾಳೆ. ಏಂಜೆಲ್‌ ಜಾಕೋಬ್‌ ಮತ್ತು ಮೇರಿ ಬೀನಾ ದಂಪತಿಯ ಏಕೈಕ ಪುತ್ರಿಯಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು.

- Advertisement -

Latest News

error: Content is protected !!