Wednesday, June 3, 2026
Homeಕರಾವಳಿಮಂಗಳೂರುಮಂಗಳೂರು:  ನಿವೃತ್ತ ಶಿಕ್ಷಕಿ ಫೌಸ್ಟಿನ್ ಸುದಾನಾ ಫುರ್ಟಾಡೊನಿಧನ

ಮಂಗಳೂರು:  ನಿವೃತ್ತ ಶಿಕ್ಷಕಿ ಫೌಸ್ಟಿನ್ ಸುದಾನಾ ಫುರ್ಟಾಡೊನಿಧನ

- Advertisement -
- Advertisement -

ಮಂಗಳೂರು: ನಿವೃತ್ತ ಶಿಕ್ಷಕಿ, ಚರ್ಚ್ ಆಫ್ ಸೌತ್ ಇಂಡಿಯಾದ ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ನಿವೃತ್ತ ಬಿಷಪ್ ಮಂಗಳೂರಿನ ರೆವರೆಂಡ್ ಸಿ.ಎಲ್. ಫುರ್ಟಾಡೊ ಅವರ ಪತ್ನಿ ಫೌಸ್ಟಿನ್ ಸುದಾನಾ ಫುರ್ಟಾಡೊ (84) ಅವರು ನವೆಂಬರ್ 25 ರಂದು ನಿಧನ ಹೊಂದಿದರು. ಮೃತರು ಪತಿ ಬಿಷಪ್ ಸಿ.ಎಲ್. ಫುರ್ಟಾಡೊ, ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಆಗಲಿದ್ದಾರೆ.

ಫೌಸ್ಟಿನ್ ಸುದಾನಾ ಫುರ್ಟಾಡೊ ಅವರು ಮಂಗಳೂರಿನ ಮಿಲಾಗ್ರಿಸ್ ಬಾಲಕರ ಶಾಲೆ ಮತ್ತು ಸೈಂಟ್ ಆಗ್ನೆಸ್ ಹೆಣ್ಮಕ್ಕಳ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ, ತುಮಕೂರು ಯುನಿಟಿ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಮತ್ತು ಮಂಗಳೂರಿನ ಬಲ್ಮಠದ ಕರ್ನಾಟಕ ಥಿಯಾಲಜಿಕಲ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರಿನ ಕೆಟಿಸಿ ಯಲ್ಲಿರುವ ಮೊಗ್ಲಿಂಗ್ ಇನ್ ಸ್ಟಿಟ್ಯೂಟ್ ಆಫ್ ಜರ್ಮನ್ ಲಾಂಗ್ವೇಜ್ ಸಂಸ್ಥೆಯ ಸ್ಥಾಪಕ ಪ್ರಾಂಶುಪಾಲೆ ಹಾಗೂ ಜರ್ಮನ್ ಉಪನ್ಯಾಸಕಿ ಆಗಿಯೂ ಸೇವೆ ಒದಗಿಸಿದ್ದರು. ಕೆಟಿಸಿ ಮಂಗಳೂರು ಇದರ ಕೋಶಾಧಿಕಾರಿಯಾಗಿ ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯದ ಸೆನೆಟ್ ಸದಸ್ಯರಾಗಿದ್ದರು. ಸಿಎಸ್‌ಐ ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ವುಮನ್ಸ್ ಫೆಲೋಶಿಪ್ ಅಧ್ಯಕ್ಷರಾಗಿದ್ದರು ಮಾತ್ರವಲ್ಲದೆ ವೈ.ಎಂ.ಸಿ.ಎ. ಮಂಗಳೂರು ಇದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು

- Advertisement -

Latest News

error: Content is protected !!