Sunday, June 7, 2026
Homeಕರಾವಳಿಉಡುಪಿಉಡುಪಿ : ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ರತ್ನಾಕರ್ ಅಮೀನ್ ಬಂಧನ

ಉಡುಪಿ : ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ರತ್ನಾಕರ್ ಅಮೀನ್ ಬಂಧನ

- Advertisement -
- Advertisement -

ಉಡುಪಿ : ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ರತ್ನಾಕರ್ ಅಮೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಜಟ್ಕಾ ನಿಲ್ದಾಣದ ಬಳಿ ಹಿಂದೂ ಜಾಗರಣಾ ವೇದಿಕೆ” ಉಡುಪಿ ಇದರ ವತಿಯಿಂದ ಪ್ರತಿಭಟನೆಯ ವೇಳೆಯಲ್ಲಿ ರತ್ನಾಕರ್ ಅಮೀನ್ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಮೇಲೆ ಪ್ರಕರಣದ ದಾಖಲಾಗಿತ್ತು. ಅದರಂತೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ವಿವರ : ದಿನಾಂಕ 15/11/2025 ರಂದು ಬೆಳಿಗ್ಗೆ 10:00 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಜಟ್ಕಾ ನಿಲ್ದಾಣದ ಬಳಿ“ ಹಿಂದೂ ಜಾಗರಣಾ ವೇದಿಕೆ” ಉಡುಪಿ ತಾಲೂಕು ವತಿಯಿಂದ ದೆಹಲಿ ಬಾಂಬ್‌ ಸ್ಪೋಟದ ಕುರಿತು ಇಸ್ಲಾಮಿಕ್‌ ಭಯೋತ್ಪಾದನೆ ಕೃತ್ಯವನ್ನು ಖಂಡಿಸಿ ನಡೆಸುತ್ತಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಬಂದೋಬಸ್ತ್‌ ಕರ್ತವ್ಯದಲ್ಲಿದ್ದು, ಸದರಿ ಕಾರ್ಯಕ್ರಮದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಭಿನ್ನ ಮತಗಳ ನಡುವೆ ವೈರ, ದ್ವೇಷ ಅಥವಾ ವೈಮನಸ್ಸಿನ್ನು ಉಂಟು ಮಾಡುವಂತೆ ಪ್ರಚೋದಿಸಿ ಹಾಗೂ ಬೇರೆ – ಬೇರೆ ಧರ್ಮಗಳ ಮಧ್ಯದಲ್ಲಿ ಅಸೌಹಾರ್ದತೆ ಹಾಗೂ ದ್ವೇಷ ಉಂಟು ಮಾಡುವ ರೀತಿ ಭಾಷಣವನ್ನು ಮಾಡಿ ಸಾರ್ವಜನಿಕರಲ್ಲಿ ಗಲಭೆ-ಗೊಂದಲ ಉಂಟು ಮಾಡುವಂತಿದ್ದು, ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವಂತಹ ಪ್ರಚೋದನಾಕಾರಿ ಹೇಳಿಕೆ ನೀಡಿದ ರತ್ನಾಕರ ಅಮೀನ್‌ ಅಜೆಕಾರುರವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 200/2025 ಕಲಂ:196(1)̧ 353(2)ಬಿಎನ್‌ ಎಸ್‌ ಬಿ.ಎನ್‌ಎಸ್‌ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

- Advertisement -

Latest News

error: Content is protected !!