Wednesday, June 3, 2026
Homeಕರಾವಳಿಉಡುಪಿಕಾರ್ಕಳ: JCB ರಿಪೇರಿ ಮಾಡುತ್ತಿರುವಾಗ ಅದರ ಬಕೆಟ್ ಹಾಗೂ ಇಂಜಿನ್ ನಡುವೆ ಸಿಲುಕಿ ಯುವಕ ಸಾವು

ಕಾರ್ಕಳ: JCB ರಿಪೇರಿ ಮಾಡುತ್ತಿರುವಾಗ ಅದರ ಬಕೆಟ್ ಹಾಗೂ ಇಂಜಿನ್ ನಡುವೆ ಸಿಲುಕಿ ಯುವಕ ಸಾವು

- Advertisement -
- Advertisement -

ಕಾರ್ಕಳ: JCB ರಿಪೇರಿ ಮಾಡುತ್ತಿರುವಾಗ ಅದರ ಬಕೆಟ್ ಹಾಗೂ ಇಂಜಿನ್ ನಡುವೆ ಸಿಲುಕಿ ಯುವಕ ಸಾವನ್ನಪ್ಪಿರುವ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಇಂಡಸ್ಟೀಯಲ್ ಏರಿಯಾದಲ್ಲಿ ನಡೆದಿದೆ. ಚಿಂಟು ಚೌಹನ್ (26) ಮೃತ ಯುವಕ.

ದಿನಾಂಕ 13/11/2025 ರಂದು 15:15 ಗಂಟೆಗೆ ಚಿಂಟು ಚೌಹಾಣ (26) ಇವರು ಇರುವ ವಿಶ್ವಾಸ್ ಗ್ಯಾರೇಜ್‌ನಲ್ಲಿ  JCB ವಾಹನವನ್ನು ರಿಪೇರಿ ಮಾಡುತ್ತಿರುವಾಗ ಗ್ಯಾರೇಜ್ ಮಾಲೀಕರಾದ ಲವೀನಾ ಪ್ರಮೀಳಾ ಡಿ’ಮೆಲ್ಲೊ ಇವರು ಯಾವುದೇ ಮುಂಜಾಗ್ರತೆ ಕ್ರಮ ವಹಿಸದೇ ಕೆಲಸ ಮಾಡಿಸುತ್ತಿದ್ದಾಗ JCB ಆಪರೇಟರ್ ಸಾಗರ್ ಈತನು JCBಯ ಮುಂದಿನ ಬಕೆಟ್‌‌ನ್ನು ಎತ್ತಿಹಿಡಿದವನ್ನು ಒಮ್ಮೆಲೇ ನಿರ್ಲಕ್ಷತನದಿಂದ ಕೆಳಗೆ ಇಳಿಸಿದ್ದಾನೆ.  ಪರಿಣಾಮ JCB ರಿಪೇರಿ ಕೆಲಸ ಮಾಡುತ್ತಿದ್ದ ಚಿಂಟು ಚೌಹಾಣ JCBಯ ಮುಂದಿನ ಬಕೆಟ್‌‌ ಹಾಗೂ ಇಂಜಿನ್ ನಡುವೆ ಸಿಲುಕಿ ಗಂಭೀರ ಗಾಯಗೊಂಡಿದ್ದಾನೆ. ಕ್ರೇನ್ ಮೂಲಕ ಬೇರ್ಪಡಿಸಿ ಚಿಕಿತ್ಸೆಯ ಬಗ್ಗೆ ಕಾರ್ಕಳದ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿ ಆತನನ್ನು ಪರೀಕ್ಷಿಸಿದ ವೈಧ್ಯರು ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!