Thursday, June 4, 2026
Homeಕರಾವಳಿವಿಟ್ಲದ ಹಿರಿಯ ಜ್ಯೋತಿಷಿ ಕುಳಮರ್ವ ಸುಬ್ರಹ್ಮಣ್ಯ ಭಟ್ ನಿಧನ

ವಿಟ್ಲದ ಹಿರಿಯ ಜ್ಯೋತಿಷಿ ಕುಳಮರ್ವ ಸುಬ್ರಹ್ಮಣ್ಯ ಭಟ್ ನಿಧನ

- Advertisement -
- Advertisement -

ವಿಟ್ಲದ ಹಿರಿಯ ಜ್ಯೋತಿಷಿ ಕುಳಮರ್ವ ಸುಬ್ರಹ್ಮಣ್ಯ ಭಟ್ ಅವರು ವಯೋಸಹಜ ಅನಾರೋಗ್ಯದಿಂದ ತಮ್ಮ 80ನೇ ವಯಸ್ಸಿನಲ್ಲಿ ವಿಟ್ಲದ ಬಸವನಗುಡಿ ಜಯದುರ್ಗ ನಿವಾಸದಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ.

ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮುಂಭಾಗದ ಕಟ್ಟಡದಲ್ಲಿ ಹಲವು ವರ್ಷಗಳ ಕಾಲ ಜ್ಯೋತಿಷ್ಯ ಕಾರ್ಯ ನಡೆಸುತ್ತಿದ್ದರು. ಅಷ್ಟೇಅಲ್ಲದೆ ಬಸವನಗುಡಿಯಲ್ಲಿರುವ ತನ್ನ ಸ್ವಗೃಹ ಜಯದುರ್ಗ ನಿವಾಸದಲ್ಲಿಯೂ ಜ್ಯೋತಿಷ್ಯ ಕಾರ್ಯ ನಡೆಸುತ್ತಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!