ಬಾಲಿವುಡ್‍ನ ಖ್ಯಾತ ನಟ ಸುನೀಲ್ ಶೆಟ್ಟಿ ‘ಜೈ’ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರವು ನವೆಂಬರ್.14ರಂದು ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಮಲ್ಲೇಶ್ವರದ ಮಂತ್ರಿ ಮಾಲ್‍ನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆದಿದ್ದು, ಈ ಸಮಾರಂಭದಲ್ಲಿ ಸುನೀಲ್ ಶೆಟ್ಟಿ ಸಹ ಹಾಜರಿದ್ದರು.
ಈ ಸಂದರ್ಭದಲ್ಲಿ ಅವರು, ಮುಂಬೈ ತಮ್ಮ ಕರ್ಮಭೂಮಿಯಾದರೆ, ಕರ್ನಾಟಕ ಜನ್ಮಭೂಮಿ ಎಂದು ಹೇಳಿದ್ದಾರೆ. ನಾನು ಬೆಂಗಳೂರಿಗೆ ಸಾಕಷ್ಟು ಬಾರಿ ಬರುತ್ತಿರುತ್ತೇನೆ. ನನ್ನ ಸಹೋದರಿ ಸೇರಿದಂತೆ ನನ್ನ ಹಲವು ಸಂಬಂಧಿಕರು ಇಲ್ಲಿದ್ದಾರೆ. ಬೆಂಗಳೂರಿನ ಜೊತೆಗೆ ಸಾಕಷ್ಟು ನೆನಪುಗಳು ಇವೆ. ರಾಜಕುಮಾರ್ ಅವರು, ಪುನೀತ್ ರಾಜ್‍ಕುಮಾರ್ ನಂಗೆ ತುಂಬಾ ಕ್ಲೋಸ್ ಇದ್ದರು. ಸುದೀಪ ತುಂಬಾ ಆತ್ಮೀಯರಾಗಿದ್ದಾರೆ. ಮುಂಬೈನಲ್ಲಿ ನಾನು ಹೆಚ್ಚು ಕೆಲಸ ಮಾಡಿದ್ದೇನೆ. ಅದು ನನ್ನ ಕರ್ಮಭೂಮಿ. ಆದರೆ ನನ್ನ ಜನ್ಮಭೂಮಿ ಕರ್ನಾಟಕದ ಮುಲ್ಕಿ’ ಎಂದು ತಿಳಿಸಿದ್ದಾರೆ.


