ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಕೆ.ಎಸ್. ಅವರು ತಾಲೂಕಿನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ದೇವಸ್ಥಾನ, ದೈವಸ್ಥಾನ ಮತ್ತು ಸಂಘ ಸಂಸ್ಥೆಗಳಿಗೆ ಸಂಬಂಧಿಸಿದ ಜಾಗಗಳನ್ನು ಸಕ್ರಮಗೊಳಿಸಿ ಅವುಗಳ ಹೆಸರಿಗೆ ಜಮೀನು ಮಂಜೂರು ಮಾಡುವಂತೆ ಸಲ್ಲಿಸಿದ್ದ ಮನವಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಶಾಸಕ ಅಶೋಕ್ ರೈ ಅವರು ತಮ್ಮ ಮನವಿ ಪತ್ರದಲ್ಲಿ, ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿನ ದೇವಸ್ಥಾನ, ದೈವಸ್ಥಾನಗಳು ಮತ್ತು ಸಂಘ ಸಂಸ್ಥೆಗಳ ಹೆಸರಿನಲ್ಲಿ ಜಮೀನಿಲ್ಲ. ಈ ಕಾರದಿಂದಾಗಿ ಸರ್ಕಾರ ಕಲ್ಪಿಸುವ ಸೌಕರ್ಯಗಳಿಂದ ವಂಚಿತವಾಗಿದೆ. ಈ ನಿಟ್ಟಿನಲ್ಲಿ ದೇವಸ್ಥಾನಗಳು ನಿರ್ಮಾಣಗೊಂಡಿರುವ ಜಾಗಗಳನ್ನು ಅವುಗಳ ಹೆಸರಿಗೆ ಮಂಜೂರು ಮಾಡುವಂತೆ ಕೋರಲಾಗಿತ್ತು ಎನ್ನಲಾಗಿದೆ.
ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಅವರು, ಶಾಸಕರ ಮನವಿ ಪತ್ರಕ್ಕೆ ಸ್ಪಂದಿಸಿ, “ಮಾನ್ಯ ಶಾಸಕರ ಪತ್ರದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮದ ದೇವಸ್ಥಾನ, ದೈವಸ್ಥಾನಗಳು ಮತ್ತು ಸಂಘ ಸಂಸ್ಥೆಯ ಹೆಸರಿನಲ್ಲಿ ಜಮೀನು ಇಲ್ಲದೆ ಸೌಕರ್ಯಗಳು ಲಭಿಸುತ್ತಿಲ್ಲ ಎನ್ನುವ ಮನವಿಯನ್ನು ಪರಿಶೀಲಿಸಿದ್ದು, ಆರ್‌ಟಿಸಿ (ಹಕ್ಕುಪತ್ರ) ಕಲಂ 1ರಲ್ಲಿ ನಮೂದಿಸಲು ನಿಯಮಾನುಸಾರ ಕ್ರಮವಹಿಸುವಂತೆ ಸೂಚಿಸಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಅತೀ ಶೀಘ್ರದಲ್ಲಿ ಸಕ್ರಮಗೊಳ್ಳಲಿರುವ ದೇವಸ್ಥಾನ ಹಾಗೂ ದೈವಸ್ಥಾನಗಳ ವಿವರ:
1)ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್ (ರಿ) ದುರ್ಗಾಪರಮೇಶ್ವರಿ ಭಜನಾ ಮಂದಿರ, ಪೆರಿಯಡ್ಕ, ಉಪ್ಪಿನಂಗಡಿ.
2) ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ, ಶಾಂತಿಗೋಡು,
3) ಶ್ರೀ ಮಾರಿಯಮ್ಮ ಮತ್ತು ಸಪರಿವಾರ ದೈವಗಳ ದೇವಸ್ಥಾನ, ನೆಟ್ಟಣಿಗೆ ಮಡ್ನರು.
4) ಶ್ರೀ ಮಾರಿಯಮ್ಮ ದೇವಸ್ಥಾನ, ವಜ್ರಮೂಲೆ ಮೇನಾಲ.
5) ಮಾತೃಭೂಮಿ ಯುವವೇದಿಕೆ, ಮಾಣಿಲ.
6) ಸಾರ್ಯ ಹಾಲು ಉತ್ಪಾದಕರ ಮಹಿಳಾ ಸಂಘ
7) ನಲಿಕೆಯವರ ಸಮಾಜ ಸೇವಾ ಸಂಘ, ಕಬಕ.
8) ಶ್ರೀ ಶಾರದಾಂಬ ಭಜನಾ ಮಂಡಳಿ, ಇಡಿದು.
9)ಆದಿ ನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ, ತೆಂಕಿಲ


