Friday, June 5, 2026
Homeಕರಾವಳಿಮಂಗಳೂರುಮಂಗಳೂರು; ಸ್ಕೂಟರ್ ಗೆ ಖಾಸಗಿ ಬಸ್‌ ಢಿಕ್ಕಿ; ಸ್ಕೂಟ‌ರ್ ಸವಾರ ಸಾವು

ಮಂಗಳೂರು; ಸ್ಕೂಟರ್ ಗೆ ಖಾಸಗಿ ಬಸ್‌ ಢಿಕ್ಕಿ; ಸ್ಕೂಟ‌ರ್ ಸವಾರ ಸಾವು

- Advertisement -
- Advertisement -

ಮಂಗಳೂರು; ಸ್ಕೂಟರ್ ಗೆ ಖಾಸಗಿ ಬಸ್‌ ಢಿಕ್ಕಿಯಾಗಿ ಸ್ಕೂಟ‌ರ್ ಸವಾರ ಸಾವನ್ನಪ್ಪಿರುವ ಘಟನೆ ಉಳ್ಳಾಲದ ರಾ.ಹೆ.66 ರ ಅಡಂ ಕುದ್ರು ಎಂಬಲ್ಲಿ  ನಡೆದಿದೆ. ಬೊಕ್ಕಪಟ್ಟ ಬೆಂಗ್ರೆ ನಿವಾಸಿ ನಾಗೇಶ್ ಪುತ್ರನ್(62) ಮೃತ ದುರ್ದೈವಿ.

ಅಡಂಕುದ್ರು ಎಂಬಲ್ಲಿ ನಾಗೇಶ್ ಅವರ ಸ್ಕೂಟರ್ ಗೆ ತೊಕ್ಕೊಟ್ಟುವಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್‌ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ನಾಗೇಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ .ಈ ಕುರಿತು ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!