ಸುಳ್ಯ; Facebook ಬಾನು ಮುಷ್ತಾಕ್ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಟ್ವಾಳದ ವ್ಯಕ್ತಿಯೊಬ್ಬರನ್ನು ಅರೆಸ್ಟ್ ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಪುರುಷೋತ್ತಮ ಆಚಾರ್ಯ ಬರಿಮಾರು ಬಂಧಿತ.
ಸಾಮಾಜಿಕ ಜಾಲತಾಣ Facebook ನಲ್ಲಿ purush acharya ಎಂಬ ಹೆಸರಿನ ಖಾತೆಯಿಂದ ದಸರಾ ಉದ್ಘಾಟನೆ ಮಾಡಿದ ಬಾನು ಮುಷ್ತಾಕ್ ರವರ ಬಗ್ಗೆ ಮತ್ತು ಮುಖ್ಯ ಮಂತ್ರಿಗಳ ಬಗ್ಗೆ ಅಸಭ್ಯ ಪದಗಳಲ್ಲಿ ನಿಂದಿಸಿ ಪೋಸ್ಟ್ ಮಾಡಿದ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅಕ್ರ 112/2025 ಕಲಂ 296,196,354 BNS ಹಾಗೂ ಸುಬ್ರಮಣ್ಯ ಠಾಣೆಯಲ್ಲಿ 55/2025 ಕಲಂ 353(3),353(4) BNS ರಂತೆ ಪ್ರಕರಣಗಳು ದಾಖಲಾಗಿತ್ತು. ಅದರಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ನ ಸಹಕಾರದಿಂದ ಸುಳ್ಯ ಪೊಲೀಸರು ಪ್ರಕರಣದ ಆರೋಪಿ ಬಂಟ್ವಾಳ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.


