- Advertisement -
![]()
- Advertisement -
ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಇಲೆಕ್ಟ್ರಿಕ್ ಆಟೋ ರಿಕ್ಷಾ ನಿಲ್ಲಿಸಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಮೃತದೇಹ ಗುರುವಾರ ನೇತ್ರಾವತಿ ನದಿಯ ಡ್ಯಾಂ ಸಮೀಪ ಮರವೊಂದರಲ್ಲಿ ಸಿಲುಕಿಕೊಂಡ ರೀತಿಯಲ್ಲಿ ಪತ್ತೆಯಾಗಿದೆ.
ಮಾರ್ನಬೈಲು ನಿವಾಸಿ ಆಟೋ ಚಾಲಕ ಪ್ರೀತಂ ಲೋಬೋ ಅವರು ನಾಪತ್ತೆಯಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಆಟೋ ಚಾಲಕನ ಆಟೋ ಪಾಣೆಮಂಗಳೂರು ಹಳೆ ಸೇತುವೆಯ ಬಳಿ ಲಭಿಸಿದ್ದು, ಈ ಬಗ್ಗೆ ಅನುಮಾನಗೊಂಡ ಬಂಟ್ವಾಳ ನಗರ ಠಾಣಾ ಪೋಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ಕೂಡ ನಡೆಸಿದ್ದರು. ಇದೀಗ ಮೃತದೇಹ ಮರವೊಂದರಲ್ಲಿ ಸಿಲುಕಿಕೊಂಡ ರೀತಿಯಲ್ಲಿ ಪತ್ತೆಯಾಗಿದೆ.
- Advertisement -


