Thursday, June 25, 2026
Homeಕರಾವಳಿಉಡುಪಿಕೆರೆಗೆ ಬಿದ್ದಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಮೇಲಕ್ಕೆತ್ತಿ ಮಾಲೀಕರಿಗೆ ಒಪ್ಪಿಸಿದ ಈಶ್ವರ್ ಮಲ್ಪೆ

ಕೆರೆಗೆ ಬಿದ್ದಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಮೇಲಕ್ಕೆತ್ತಿ ಮಾಲೀಕರಿಗೆ ಒಪ್ಪಿಸಿದ ಈಶ್ವರ್ ಮಲ್ಪೆ

- Advertisement -
- Advertisement -

ಚಿಕ್ಕಮಗಳೂರು: ಕೆರೆಗೆ ಬಿದ್ದಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಮೇಲಕ್ಕೆತ್ತಿ ಈಶ್ವರ್ ಮಲ್ಪೆ ಮಾಲೀಕರಿಗೆ ಒಪ್ಪಿಸಿದ ಘಟನೆ ಚಿಕ್ಕಮಗಳೂರಿನ ಮಾಗಡಿ ಬಳಿ ನಡೆದಿದೆ.

ಚಿಕ್ಕಮಗಳೂರಿನ ಮಾಗಡಿ ಬಳಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕೆರೆಗೆ ಬಿದ್ದಿತ್ತು.ಕಾರಿನಲ್ಲಿದ್ದ ಜ್ಯುವೆಲ್ಲರಿ ಅಂಗಡಿಯ ಮಾಲೀಕ ಈಜಿ ದಡ ಸೇರಿದ್ದರು. ಕಾರನ್ನು ಕ್ರೇನ್ ತರಿಸಿ ಮೇಲಕ್ಕೆತ್ತಲಾಯಿತು. ಆದರೆ ಕಾರಿನಲ್ಲಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಚೀಲ ನೀರಿಗೆ ಬಿದ್ದಿತ್ತು. ಕೂಡಲೇ ಈ ಬಗ್ಗೆ ಈಶ್ವರ್ ಮಲ್ಪೆಗೆ ಕರೆ ತಿಳಿಸಲಾಯಿತು. ಅಲ್ಲಿಗೆ ತೆರಳಿದ ಈಶ್ವ‌ರ್ ಮಲ್ಪೆ ತಂಡ ಕೇವಲ 15 ನಿಮಿಷದಲ್ಲಿ ಚಿನ್ನದ ಚೀಲವನ್ನು ನೀರಿನಿಂದ ಮೇಲಕ್ಕೆತ್ತಿ ಮಾಲೀಕರಿಗೆ ಒಪ್ಪಿಸಿದ್ದಾರೆ.

ಸುಮಾರು 20 ಅಡಿ ಆಳದಲ್ಲಿ ಕೆರೆ ನೀರಿಗೆ ಬಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಇರುವ ಚೀಲವನ್ನು ಮೇಲಕ್ಕೆತ್ತಿದ ಈಶ್ವ‌ರ್ ಮಲ್ಪೆ ಅವರ ತಂಡ ವಾರಸುದಾರರಿಗೆ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚಿನ್ನಾಭರಣವಿದ್ದ ಚೀಲ ಕೆಸರಿನಲ್ಲಿ ಹೂತು ಹೋಗಿತ್ತು. ಎಲ್ಲಡೆ ಕತ್ತಲೆ, ಕಣ್ಣಿಗೆ ಏನೂ ತೋರುತ್ತಿರಲಿಲ್ಲ. ಸುಮಾರು 20 ಅಡಿಗಳಷ್ಟು ಆಳಕ್ಕೆ ಹೋಗಿ ಜಾಲಾಡಿದಾಗ ಕೈಗೆ ಸಿಕ್ಕಿತು. ದೇವರ ಅನುಗ್ರಹ ಹಾಗೂ ಜನರ ಆಶೀರ್ವಾದದಿಂದ ಚಿನ್ನ ಮತ್ತೆ ಸಿಗುವಂತಾಗಿದೆ ಎಂದು ಈಶ್ವ‌ರ್ ಮಲ್ಪೆ ತಿಳಿಸಿದ್ದಾರೆ.

- Advertisement -

Latest News

error: Content is protected !!