Wednesday, October 14, 2026
Homeಕರಾವಳಿಮಂಗಳೂರುಬೆಳ್ತಂಗಡಿ : ನಾಲ್ಕು ಮಂದಿಗೆ ಎಸ್.ಐ.ಟಿ ವಿಚಾರಣೆಗೆ ವಿನಾಯಿತಿ ಕೇಳಿದ ವಕೀಲರು

ಬೆಳ್ತಂಗಡಿ : ನಾಲ್ಕು ಮಂದಿಗೆ ಎಸ್.ಐ.ಟಿ ವಿಚಾರಣೆಗೆ ವಿನಾಯಿತಿ ಕೇಳಿದ ವಕೀಲರು

- Advertisement -
- Advertisement -

ಬೆಳ್ತಂಗಡಿ : ಬುರುಡೆ ಪ್ರಕರಣ ಸಂಬಂಧ ಎಸ್ಐಟಿ ವಿಚಾರಣೆಗೆ ಇನ್ನೂ ಹಾಜರಾಗದ ಕಾರಣ ಒಂದು ವಾರ ವಿನಾಯಿತಿ ಕೇಳಿದ ನಾಲ್ಕು ಮಂದಿ ಪರ ವಕೀಲರು.

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಅ.27 ರಂದು ಮಹೇಶ್ ಶೆಟ್ಟಿ ತಿಮರೋಡಿ ,ಗಿರೀಶ್ ಮಟ್ಟಣ್ಣವರ್, ಜಯಂತ್. ಟಿ, ವಿಠಲ್ ಗೌಡ ವಿಚಾರಣೆಗೆ ಈವರೆಗೂ ಹಾಜರಾಗಿಲ್ಲ. ಈ ನಾಲ್ಕು ಮಂದಿ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ‌. ಸುಜಾತ ಭಟ್ ಮಾತ್ರ ಎಸ್.ಐ.ಟಿ ಸೂಚನೆಯಂತೆ ವಿಚಾರಣೆಗೆ ಹಾಜರಾಗಿದ್ದಾರೆ.

ತಿಮರೋಡಿ ಮಹೇಶ್ ಶೆಟ್ಟಿ, ಗಿರೀಶ್ ಮಟ್ಟಣ್ಣವರ್, ಜಯಂತ್. ಟಿ, ಸೌಜನ್ಯ ಮಾವ ವಿಠಲ್ ಗೌಡ ನಾಲ್ಕು ಮಂದಿ ಈವರೆಗೂ ಎಸ್.ಐ.ಟಿ ಕಚೇರಿಗೆ ಹಾಜರಾಗಿಲ್ಲ. ಈ ನಡುವೆ ಉಡುಪಿಯಿಂದ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಬಂದ ವಕೀಲೇ ಅಂಬಿಕಾ ಪ್ರಭು ಅ.27 ರಂದು ಬಂದು ನಾಲ್ಕು ಮಂದಿಗೆ 7 ದಿನಗಳ ಕಾಲ ವಿಚಾರಣೆಗೆ ವಿನಾಯಿತಿ ನೀಡಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.

ಇನ್ನೂ ನಾಲ್ಕು ಮಂದಿಗೆ ಎಸ್.ಐ.ಟಿ ಅಧಿಕಾರಿಗಳು 7 ದಿನಗಳ ಕಾಲಾವಕಾಶ ನೀಡುತ್ತಾ ಎಂದು ಕಾದು ನೋಡಬೇಕಾಗಿದೆ.

- Advertisement -

Latest News

error: Content is protected !!