ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿಯನ್ನು ಪುತ್ತೂರು ಎ.ಸಿ.ಸ್ಟೆಲ್ಲಾ ವರ್ಗೀಸ್ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಒಂದು ವರ್ಷ ಗಡಿಪಾರು ಆದೇಶ ಮಾಡಿದ ವಿರುದ್ಧ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಮತ್ತೆ ಎರಡನೇ ಬಾರಿ ಅ.27 ರಂದು ಪ್ರತಿಭಟನೆ ನಡೆಸಲು ಬೆಳ್ತಂಗಡಿ ಪೊಲೀಸರಿಗೆ ಮನವಿ ಪತ್ರ ನೀಡಿದ್ದರು. ಆದ್ರೆ ಪೊಲೀಸರು ಪ್ರತಿಭಟನೆ ಅನುಮತಿ ನೀಡಲು ನಿರಾಕರಿಸಿದ್ದಾರೆ.
ಬೆಳ್ತಂಗಡಿ ಪೊಲೀಸರಿಗೆ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಅನಿಲ್ ಅಂತರ ಅ.27 ರಂದು ಪ್ರತಿಭಟನೆ ನಡೆಸಲು ಅ.25 ರಂದು ಮನವಿ ನೀಡಿದ್ದರು. ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಪ್ರಕರಣ ಉಚ್ಚ ನ್ಯಾಯಾಲಯದಲ್ಲಿ (30021/25) ವಿಚಾರಣೆ ನಡೆದು ಆದೇಶ ಬಾಕಿಯಿರುವ ಕಾರಣದಿಂದ ಯಾವುದೇ ಪ್ರತಿಭಟನೆಗಳನ್ನು ಮಾಡಲು ಅವಕಾಶವಿಲ್ಲ ಹಾಗೂ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ್ರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆಳ್ತಂಗಡಿ ಪೊಲೀಸರು ಅನುಮತಿಯನ್ನು ನಿರಾಕರಿಸಿ ಹಿಂಬರಹ ನೀಡಿದ್ದಾರೆ.
ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಕಡೆಯಿಂದ ಈ ಮೊದಲು ಪ್ರತಿಭಟನೆ ಮಾಡಲು ಬೆಳ್ತಂಗಡಿ ತಹಶೀಲ್ದಾರ್ ಗೆ ಅನುಮತಿ ಕೇಳಿದ್ದರು ಆದ್ರೆ ಬೆಳ್ತಂಗಡಿ ಪೊಲೀಸರ ನಿರ್ದೇಶನದಂತೆ ತಹಶೀಲ್ದಾರ್ ಅನುಮತಿಯನ್ನು ನೀಡಿರಲ್ಲಿಲ್ಲ. ಇದೀಗ ಎರಡನೇ ಭಾರಿ ಕೂಡ ಪ್ರತಿಭಟನೆಗೆ ಅನುಮತಿ ಸಿಕ್ಕಿಲ್ಲ.


