Thursday, June 4, 2026
Homeಕರಾವಳಿಮಂಗಳೂರುಬಂಟ್ವಾಳ: ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರು ಪಲ್ಟಿ; ನಾಲ್ವರು ಪ್ರಯಾಣಿಕರಿಗೆ ಗಾಯ

ಬಂಟ್ವಾಳ: ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರು ಪಲ್ಟಿ; ನಾಲ್ವರು ಪ್ರಯಾಣಿಕರಿಗೆ ಗಾಯ

- Advertisement -
- Advertisement -

ಬಂಟ್ವಾಳ: ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರೊಂದು ಪಲ್ಟಿಯಾಗಿ ನಾಲ್ವರು ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಬಿ.ಸಿ. ರೋಡ್ ಬಳಿಯ ನಾರಾಯಣ ಗುರು ಸರ್ಕಲ್‌ನಲ್ಲಿ ನಡೆದಿದೆ. ಅಪಘಾತದಲ್ಲಿ ಫರ್ಜಿನ ನಾಜರ್, ಕೃಪಾಲ್ ಕೆ.ಬಿ, ಜಿ.ಎಸ್. ಶ್ರೀಜಿತ ಮತ್ತು ಚಾಲಕ ಗಾಯಗೊಂಡವರು.

ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ಬಿ.ಸಿ. ರೋಡ್ ಬಳಿಯ ನಾರಾಯಣ ಗುರು ಸರ್ಕಲ್‌ನಲ್ಲಿ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ, ನಾಲ್ವರು ಪ್ರಯಾಣಿಕರಿಗೆ ಗಾಯವಾಗಿದ್ದು, ಕಾರು ಜಖಂಗೊಂಡಿದೆ.

ಚಾಲಕನು ಕಾರನ್ನು ಅತಿ ವೇಗದಿಂದ ಓಡಿಸಿದ್ದು, ಆತನ ನಿರ್ಲಕ್ಷ್ಯತನದಿಂದಲೇ ಈ ಅಪಘಾತ ನಡದಿದೆ. ಅವರೆಲ್ಲರೂ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!