Thursday, June 4, 2026
Homeಪ್ರಮುಖ-ಸುದ್ದಿರನ್ ವೇಯಿಂದ ಜಾರಿ ಸಮುದ್ರಕ್ಕೆ ಉರುಳಿದ ವಿಮಾನ

ರನ್ ವೇಯಿಂದ ಜಾರಿ ಸಮುದ್ರಕ್ಕೆ ಉರುಳಿದ ವಿಮಾನ

- Advertisement -
- Advertisement -

ಹಾಂಗ್ ಕಾಂಗ್: ವಿಮಾನ ರನ್‌ವೇಯಿಂದ ಜಾರಿ ಸಮುದ್ರಕ್ಕೆ ಬಿದ್ದ ಘಟನೆ ಹಾಂಗ್ ಕಾಂಗ್ ನಲ್ಲಿ ಸಂಭವಿಸಿದೆ.

ಹಾಂಗ್ ಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಟರ್ಕಿಶ್ ಸರಕು ವಿಮಾನ ಸಮುದ್ರಕ್ಕೆ ಬಿದ್ದಿದೆ.

ಟರ್ಕಿಶ್ ಸರಕು ಸಾಗಣೆ ಸಂಸ್ಥೆ ಏರ್‌ಎಸಿಟಿ ನಿರ್ವಹಿಸುತ್ತಿದ್ದ ಬೋಯಿಂಗ್ 747 ಸರಕು ವಿಮಾನವು ರನ್ ವೇಯಿಂದ ಜಾರಿ ಬಿದ್ದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

ವಿಮಾನದಲ್ಲಿದ್ದ ಮೂವರನ್ನು ರಕ್ಷಣೆ ಮಾಡಲಾಗಿದ್ದು, ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

- Advertisement -

Latest News

error: Content is protected !!