Thursday, June 4, 2026
Homeಕರಾವಳಿಮಂಗಳೂರುಮಂಗಳೂರು;ಅಪ್ರಾಪ್ತ ಬಾಲಕಿ ಮೇಲೆ ಮಲತಂದೆಯಿಂದಲೇ ಅತ್ಯಾಚಾರ; ಆರೋಪಿಯ ಬಂಧನ

ಮಂಗಳೂರು;ಅಪ್ರಾಪ್ತ ಬಾಲಕಿ ಮೇಲೆ ಮಲತಂದೆಯಿಂದಲೇ ಅತ್ಯಾಚಾರ; ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು; ಅಪ್ರಾಪ್ತ ಬಾಲಕಿ ಮೇಲೆ ಮಲತಂದೆಯೇ ಅತ್ಯಾಚಾರವೆಸಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲ ಬೈಪಾಸ್ ನಲ್ಲಿ ನಡೆದಿದೆ. ಅಮೀ‌ರ್ ಬಂಧಿತ ಆರೋಪಿ. ಈತನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಸಂತ್ರಸ್ತೆಯ ತಂದೆ ಮೃತಪಟ್ಟ ಬಳಿಕ ಆಕೆಯ ತಾಯಿ ಅಮೀರ್ ನನ್ನು ವಿವಾಹವಾಗಿ ಕುಂಪಲದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.

ಈ ಮಧ್ಯೆ ತಾಯಿ ಹಾಗೂ ಅಪ್ರಾಪ್ತ ಮಲಗಿದ್ದ ಸಂದರ್ಭದಲ್ಲಿ ಆರೋಪಿ ಅಮೀ‌ರ್ ಅಪ್ರಾಪ್ತ ಮೇಲೆ ಅತ್ಯಾಚಾರ ಎಸಗಿದ್ದ. ಈ ಸಂದರ್ಭ ಅಪ್ರಾಪ್ತ ಕಿರುಚಾಡಿದಾಗ ಆಕೆಯ ಬಾಯಿಗೆ ತಲೆದಿಂಬು ಇಟ್ಟು ಬಾಯಿ ಮುಚ್ಚಿಸಿದ್ದ ಎಂದು ಆರೋಪಿಸಲಾಗಿದೆ.

- Advertisement -

Latest News

error: Content is protected !!