Friday, June 5, 2026
Homeಕರಾವಳಿಮಂಗಳೂರುಕಡಬ: ಮನೆಯಲ್ಲಿ ಯಾರೂ ಇಲ್ಲದ ವೇಳೆ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕಡಬ: ಮನೆಯಲ್ಲಿ ಯಾರೂ ಇಲ್ಲದ ವೇಳೆ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

- Advertisement -
- Advertisement -

ಕಡಬ: ಮನೆಯಲ್ಲಿ ಯಾರೂ ಇಲ್ಲದ ವೇಳೆ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಂಬಾರು ಗ್ರಾಮದ ಕಾಯರ್ತಡ್ಕ ಎಂಬಲ್ಲಿ ನಡೆದಿದೆ. ಶೇಖರ ಗೌಡ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಶೇಖರ್ ಗೌಡ ಅವರ ಪತ್ನಿ ಸುಮಾರು 4 ತಿಂಗಳ ಹಿಂದೆ ಮೈಗೆ  ಬೆಂಕಿ ತಾಗಿ  ಚಿಕಿತ್ಸೆ ಪಡೆದರೂ ಇನ್ನು ಸರಿಯಾಗಿ ಗುಣ ಮುಖರಾಗಿರುವುದಿಲ್ಲ. ಹೀಗಾಗಿ  ಮನೆಯಲ್ಲಿ ಯಾರೂ ಇಲ್ಲದೇ ಇದ್ದುದರಿಂದ ಬೇಸರಗೊಂಡು ಹೆಚ್ಚಾಗಿ ಮದ್ಯ ಸೇವಿಸುತ್ತಿದ್ದರು .

ಅ.12  ರ ರಾತ್ರಿ  ಮೃತರ ಮಗ  ರಾತ್ರಿ ಊಟ ಮಾಡಿ ಮಲಗಿ ಸುಮಾರು  11-30 ಗಂಟೆ ಸಮಯಕ್ಕೆ ಹೊರಗೆ ಬಂದಾಗ  ತಂದೆ  ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಹುಡುಕಾಡಿದ್ದಾರೆ.  ಕೆಲ ಹೊತ್ತಿನ ಬಳಿಕ  ಮನೆಯ ಎದುರು ರಬ್ಬರ್  ತೋಟದಲ್ಲಿ ರಬ್ಬರ್ ಮರಕ್ಕೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಈ ಬಗ್ಗೆ  ಮೃತರ ಮಗ ಜಯಂತ   ಎಂಬವರು ನೀಡಿದ ದೂರಿನಂತೆ  ಕಡಬ ಪೊಲೀಸ್‌‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

- Advertisement -

Latest News

error: Content is protected !!