- Advertisement -
![]()
- Advertisement -
ಉಡುಪಿ : ಅಸಹಾಯಕ ಸ್ಥಿತಿಯಲ್ಲಿ ಪೊದೆಯೊಳಗಿದ್ದ ವೃದ್ಧೆಯನ್ನು ರಕ್ಷಣೆ ಮಾಡಿದ ಘಟನೆ ಇಂದ್ರಾಳಿಯ ರೈಲು ನಿಲ್ದಾಣದ ಬಳಿ ನಡೆದಿದೆ.
ವಿಚಾರಿಸಲ್ಪಟ್ಟಾಗ ವೃದ್ಧೆಯು ಹೆಸರು ವಸಂತಿಬಾಯಿ, ಮೂಡುಸಗ್ರಿ ಗದ್ದುಗೆ ಬಳಿ ಮನೆ ಇರುವುದು, ಮಗ ಕರೆತಂದು ಬಿಟ್ಟುಹೋಗಿದ್ದಾನೆ ಎಂದು ಹೇಳಿಕೊಂಡಿದ್ದಾರೆ.
ವೃದ್ಧೆಯ ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ರೈಲು ಹಳಿ ತಪಾಸಣೆಗೆಂದು, ನಡೆದು ಸಾಗುತ್ತಿದ್ದ ಗಸ್ತು ಸಿಬ್ಬಂದಿಗೆ ಪೊದೆಯೊಳಗೆ ವೃದ್ಧೆ ಇರುವುದು ಕಂಡುಬಂದಿದೆ. ತಕ್ಷಣ ಗಸ್ತು ಸಿಬ್ಬಂದಿ ರೈಲ್ವೆ ಆರ್ ಪಿ ಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಲ್ಪಟ್ಟ ವೃದ್ಧೆಯನ್ನು ಅಂಬುಲೆನ್ಸ್ ವಾಹನದಲ್ಲಿ ಸಾಗಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ. ವೃದ್ಧೆಯ ಸಂಬಂಧಿಕರು ತುರ್ತಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.
- Advertisement -


