- Advertisement -
![]()
- Advertisement -
ಬಂಟ್ವಾಳ: ತಾಲೂಕಿನ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆಯಲ್ಲಿ ಇಂದು ಬೆಳಿಗ್ಗೆ 9.30 ಕ್ಕೆ ದೇವಸ್ಥಾನದ ರಾಜಾಂಗಣದಲ್ಲಿ, 2026ನೇ ಜ.14 ಮಕರ ಸಂಕ್ರಮಣ ದಿನ ಧ್ವಜಾರೋಹಣ ಗೊಂಡು 5 ದಿನ ನಡೆಯುವ ವರ್ಷಾವಧಿ ಜಾತ್ರಾ ಮಹೋತ್ಸವ ವ್ಯವಸ್ಥಿತವಾಗಿ ನಡೆಸಲು ಊರ ಭಗವದ್ ಭಕ್ತರ ಸಭೆಯನ್ನು ಕರೆದು ಉತ್ಸವ ಸಮಿತಿಯನ್ನು ರಚಿಸಲಾಯಿತು.
ಗೌರವ ಅಧ್ಯಕ್ಷ ರಾಗಿರಮಾನಾಥ ರೈ ಕಳ್ಳಿಗೆ ಗುತ್ತು, ಮಾಜಿ ಸಚಿವರು, ಅಧ್ಯಕ್ಷರಾಗಿ ಭವಿಷ್ ಶೆಟ್ಟಿ ಕೋಡಿಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ದೇವಂದಬೆಟ್ಟು, ಕೋಶಾಧಿಕಾರಿಯಾಗಿ ನಾಗೇಶ್ ದರಿಬಾಗಿಲು, ಹೋಟೆಲ್ ಪಂಚಮಿ ದರಿಬಾಗಿಲು ಹಾಗೂ ಗೌರವ ಸಲಹೆಗಾರು, ಉಪಾಧ್ಯಕ್ಷರು ಜತೆ ಕಾರ್ಯದರ್ಶಿಗಳು ಹಾಗೂ ಸದಸ್ಯರ ಸಮಿತಿಯನ್ನು ರಚಿಸಲಾಯಿತು.
- Advertisement -


