ಬೆಳ್ತಂಗಡಿ : ಪಟ್ಟ ಜಾಗದ ಒತ್ತುವರಿ ಕುಮ್ಕಿ ಜಾಮೀನು ಎಂದು ಸುಳ್ಳು ಹೇಳಿ ಸರಕಾರಿ ಜಾಮೀನನ್ನು ಮಾರಾಟ ಮಾಡಿ ಒಂದು ಕೋಟಿ ರೂಪಾಯಿ ಹಣ ವರ್ಗಾವಣೆಯಿಸಿಕೊಂಡು ವಂಚನೆ ಮಾಡಿದ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಂಗಳೂರು ನಗರದ ಕೊಟ್ಟಾರ ಚೌಕಿ ನಿವಾಸಿ ಶಶಿಧರ ಅಚ್ಯುತ ತೋಟಂಟಿಲ (61) ಎಂಬವರು ನೀಡಿದ ದೂರಿನ ಮೇರೆಗೆ ಆ.19 ರಂದು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್(ರಿ) ಅಧ್ಯಕ್ಷ ಸೋಮನಾಥ್ ನಾಯಕ್ ಮತ್ತು ಸದಸ್ಯ ಹಾಗೂ ಹೋರಾಟಗಾರ ರಂಜನ್ ರಾವ್ ಎರ್ಡೂರು ವಿರುದ್ಧ BNS-2023,(u/s-318(4),r/w3(5)) ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆ ಎಂಬಲ್ಲಿ ದಿನಾಂಕ 04-10-2025 ರಂದು ರಂಜನ್ ರಾವ್ ಎರ್ಡೂರು ಎಂಬವರ ಮಾಲಕತ್ವದ ಸರ್ವೆ ನಂ 85/3ಎ ಜಮೀನಿಗೆ ಸಂಬಧಪಟ್ಟಂತೆ 0.28.50 ಎಕ್ರೆ ಜಮೀನನ್ನು ಕುರಿತು ಆಪಾದಿತ ಸೋಮನಾಥ್ ನಾಯಕ್ ಎಂಬವರ ಮುಂದಾಳತ್ವದಲ್ಲಿ ರಂಜನ್ ರಾವ್ ಎರ್ಡೂರು ರವರಿಗೂ ಹಾಗೂ ಮಂಗಳೂರಿನ ಶಶಿಧರವರು ಕರಾರು ಆಗಿದ್ದು ಹೀಗಿರುತ್ತಾ ಮೇಲೆ ತಿಳಿಸಿದ ಜಮೀನಿನೊಟ್ಟಿಗೆ 0.70.25 ಎಕ್ರರೆ ಜಮೀನು ಇದರೊಟ್ಟಿಗೆ ಲಗತ್ತು ಇದ್ದು ಸದ್ಯಕ್ಕೆ ಕುಮ್ಕಿ ಎಂದು ಕಾಣಿಸುತ್ತೇವೆ. ಮುಂದಕ್ಕೆ ಈ ಜಮೀನನ್ನು ಆರೋಪಿ ರಂಜನ್ ರಾವ್ ಎರ್ಡೂರು ರವರ ಮುಖೇನ ಅವರ ವರ್ಗ ಜಮೀನಿನೊಟ್ಟಿಗೆ ಸೇರಿಸಿ ತಂತಿ ಬೇಲಿ ಹಾಕಿಸಿ ಆಪಾದಿತರ ಸ್ವಾಧೀನದಲ್ಲಿದ್ದು ಮುಂದಕ್ಕೆ ಸದ್ರಿ 0.70.25 ಎಕ್ರೆ ಜಮೀನು ಕುಮ್ಕಿ ಆಗಿದ್ದು ಮುಂದಕ್ಕೆ ನನ್ನ ಪ್ರಭಾವವನ್ನು ಬಳಿಸಿ ದರ್ಖಾಸ್ತು ಮಾಡಿಸಿಕೊಂಡು ನಿಮಗೆ ಒಟ್ಟು 0.28.50 ಹಾಗೂ 0.70.25 ಒಟ್ಟು 0.98.75 ಎಕ್ರೆ ಜಮೀನನ್ನು ರಿಜಿಸ್ಟರ್ ದಾಖಲು ಮುಖೇನ ಕ್ರಯವರಿಸಿ ನಿಮ್ಮ ಸ್ವಾಧಿನಕ್ಕೆ ಕೊಡುತ್ತೇನೆಂದು ಹೇಳಿ ಅಪಾಧಿತರು ಒಟ್ಟು 90,00,000 /-ರೂಪಾಯಿಗೆ ಕರಾರು ಮಾಡಿಕೊಂಡಿದ್ದು ಅದರಂತೆ ಆಪಾದಿತ ರಂಜನ್ ರಾವ್ ಎರ್ಡೂರು ರವರ ಕೆನರಾ ಬ್ಯಾಂಕ್ ಖಾತೆಗೆ 24, 00,000 ಲಕ್ಷ ಹಾಗೂ ಆಪಾದಿತ ಸೋಮನಾಥ ನಾಯಕ್ ರವರ ಕೆನರಾ ಖಾತೆಗೆ 12,61250/- ರೂ ಹಾಗೂ ಆಪಾದಿತ ಸೋಮನಾಥ ನಾಯಕ್ ರವರ ಪತ್ನಿ ಕೆ ವಿದ್ಯಾನಾಯಕ್ ರವರ ಕೆನರಾ ಬ್ಯಾಂಕ್ ಖಾತೆಗೆ ಒಟ್ಟು 19 ಲಕ್ಷ ರೂಪಾಯಿಗಳು ಹಾಗೂ ಆರೋಪಿಯ ಸಹಾಯಕರಾದ ದಯಾನಂದ ಪೂಜಾರಿರವರ ಖಾತೆಗೆ 16 ಲಕ್ಷ ಹಾಗೂ ಮತ್ತೊಬ್ಬ ಬಾಬು ಎ ರವರ ಖಾತೆಗೆ 8 ಲಕ್ಷ ಹಾಗೂ ಸಂದೀಪ್ ರವರ ಖಾತೆಗೆ 11 ಲಕ್ಷ ಹಾಗೂ ಭಾರತಿರವರ ಖಾತೆಗೆ 6 ಲಕ್ಷ, ಹಾಗೂ ಸೋಮಶೇಖರ್ ರವರ ಯೂನಿಯನ್ ಬ್ಯಾಂಕ್ ಖಾತೆಗೆ 40 ಲಕ್ಷ ಹೀಗೆ ಒಟ್ಟು 1,00,61,250/- ರೂಪಾಯಿ ಹಣವನ್ನು ಶಶಿಧರ ರವರು 90 ಲಕ್ಷಕ್ಕೆ ಕರಾರು ಆಗಿದ್ದರೂ ಸಹ ದರ್ಖಾಸು ಮಾಡಿಸಿಕೊಡುವುದಾಗಿ 1,00,61,250/- ರೂ ಹಣವನ್ನು ವಿವಿಧ ಖಾತೆಗೆ ಹಾಕಿಸಿ ಈ ಬಗ್ಗೆ ಶಶಿಧರ ಇದು ಕುಮ್ಕಿ ಭೂಮಿಯಲ್ಲ ದರ್ಖಾಸು ಮಾಡಿಸುವುದು ಕಷ್ಟಸಾಧ್ಯವೆಂದು ಸೋಮನಾಥ ನಾಯಕ್ ರವರಿಗೂ ತಿಳಿಸಿದರೂ ಕೂಡ ಆ ವಿಷಯ ನಿಮಗೆ ಬೇಡ ಎಂದು ತಿಳಿಸಿ ಶಶಧರ ಗೆ ಆಪಾದಿತರು ಮೇಲ್ಕಾಣಿಸಿದ 0.70.25 ಎಕ್ರೆ ಜಾಗವು ಕುಮ್ಕಿ ಜಮೀನು ಎಂದು ಹೇಳಿ ಸರಕಾರಿ ಜಮೀನನ್ನು ಅಕ್ರಮಿಸಿರುವ ಕುರಿತು ಸೋಮನಾಥ ನಾಯಕ್ ರವರ ವಿರುದ್ಧ ಕರ್ನಾಟಕ ಭೂಕಬಳಿಕೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿದ್ದು ಇದರಿಂದ ಬಚವಾಗಲು ದಿನಾಂಕ 14-05-2026 ರಂದು 28 ಸೆಂಟ್ಸ್ ಕೃಷಿ ಭೂಮಿಯನ್ನು ದಸ್ತಾವೇಜು ನಂಬ್ರ 693/2026-27 ರಂತೆ ಆಪಾದಿತರು ರಿಜಿಸ್ಟರ್ ಮಾಡಿಕೊಟ್ಟಿರುವುದಾಗಿದೆ. ಈ ರೀತಿಯಾಗಿ ಆಪಾದಿತರು ತನ್ನ ಅತಿಕ್ರಮಿಸಿರುವ ಸರಕಾರಿ ಜಮೀನನ್ನು ಸೇರಿಸಿ ಒಟ್ಟು 0.98.75 ಎಕ್ರೆ ಜಾಗವನ್ನು ಕೊಡುವುದಾಗಿ ಶಶಿಧರ ಅವರಿಗೆ 90 ಲಕ್ಷಕ್ಕೆ ಕರಾರು ಆದರೂ ಕೂಡ 1,00,61,250/- ರೂ ಹಣವನ್ನು ಪಡೆದು ವಂಚನೆ ಮಾಡಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


