Sunday, June 7, 2026
Homeಕರಾವಳಿರಸ್ತೆ ಅಪಘಾತದಲ್ಲಿ ಗಾಯಗೊಂಡು 4 ತಿಂಗಳಿನಿಂದ ಕೋಮಾದಲ್ಲಿದ್ದ ಅಪೂರ್ವ ಕೆ ಭಟ್‌ ನಿಧನ

ರಸ್ತೆ ಅಪಘಾತದಲ್ಲಿ ಗಾಯಗೊಂಡು 4 ತಿಂಗಳಿನಿಂದ ಕೋಮಾದಲ್ಲಿದ್ದ ಅಪೂರ್ವ ಕೆ ಭಟ್‌ ನಿಧನ

- Advertisement -
- Advertisement -

ಪುತ್ತೂರು; ಇಲ್ಲಿನ ನಿವಾಸಿ ಅಪೂರ್ವ ಕೆ ಭಟ್‌ ಅವರು ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡಿದ್ದು, ಕೋಮಾದಲ್ಲಿದ್ದ ಅವರು ಅ.೦7 ರಂದು ಸಂಜೆ 6 ಗಂಟೆಗೆ ಚಿಕಿತ್ಸೆ ಫಲಕರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ಮೇ ತಿಂಗಳ ಅಂತ್ಯದಲ್ಲಿ ಅಪೂರ್ವ ಹೋಗುತ್ತಿದ್ದ ಕಾರ್‌ಗೆ ಬಸ್‌ ಬಂದು ಗುದ್ದಿತ್ತು ಎನ್ನಲಾಗಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಫೈನಾನ್ಸ್‌ ಬಗ್ಗೆ ಮಾಹಿತಿ ಕೊಟ್ಟು, ಅನೇಕರಿಗೆ ಪರಿಚಿತರಾಗಿದ್ದ ಆಶೀಶ್‌ ಸರಡ್ಕ ಅವರ ಪತ್ನಿ ಅಪೂರ್ವ ಕೆ ಭಟ್‌ ಪತಿ, ಮಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಇಂದು ಪುತ್ತೂರಿನ ಮುರದ ಮನೆಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

- Advertisement -

Latest News

error: Content is protected !!