ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯ ವಿದ್ಯಾರ್ಥಿಗಳು ಸೆಪ್ಟೆಂಬರ್ ೨೩ ಮತ್ತು ೨೪ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸಂತೋಷ್ ಕುಮಾರ್ ಹಾಗೂ ರವಿಕಲಾ ದಂಪತಿ ಪುತ್ರಿ, ೧೦ನೇ ತರಗತಿಯ ವಿದ್ಯಾರ್ಥಿನಿ ಲಾಸ್ಯಾ ಸಂತೋಷ್ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ, ೧೫೦೦ ಮೀ. ಓಟದಲ್ಲಿ ಪ್ರಥಮ ಸ್ಥಾನ, ಈಟಿ ಎಸೆತದಲ್ಲಿ ದ್ವಿತೀಯ ಸ್ಥಾನ ಹಾಗೂ ೪x೪೦೦ ಮೀ. ರಿಲೇಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಅನಿಲ್ ಕುಮಾರ್ ರೈ ಡಿ. ಹಾಗೂ ಚೈತ್ರಾ ಎ. ರೈ ದಂಪತಿ
ಪುತ್ರಿ, ೧೦ನೇ ತರಗತಿಯ ವಿದ್ಯಾರ್ಥಿನಿ ತನ್ವಿ ಎ. ರೈ ೪x೪೦೦ ಮಿಡ್ಲೆ ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಲೋಕನಾಥ್ ಶೆಟ್ಟಿ ಮತ್ತು ದಿವ್ಯ ರೈ.ಪಿ ದಂಪತಿ ಪುತ್ರ ೧೦ನೇ ತರಗತಿಯ ವಿದ್ಯಾರ್ಥಿ ಹಿಮಾಂಶು ಎಲ್. ಶೆಟ್ಟಿ ಈಟಿ ಎಸೆತದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ಎನ್. ಕೃಷ್ಣ ನಾಯ್ಕ್ ಮತ್ತು ರಮ್ಯಕೃಷ್ಣ ದಂಪತಿ ಪುತ್ರಿ, ೯ನೇ ತರಗತಿಯ ವಿದ್ಯಾರ್ಥಿನಿ ಆರುಷಿ ಎನ್. ಈಟಿ ಎಸೆತದಲ್ಲಿ ಪ್ರಥಮ ಸ್ಥಾನ ಮತ್ತು ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ದಿ. ಜನಾರ್ದನ ಗೌಡ ಮತ್ತು ಶಾರದ ದಂಪತಿ ಪುತ್ರಿ ಬಿ. ತ್ರಿಷಾ ೪೦೦ ಮೀಟರ್ ಅಡೆತಡೆ ಓಟದಲ್ಲಿ (ಹರ್ಡಲ್ಸ್) ದ್ವಿತೀಯ ಸ್ಥಾನ ಮತ್ತು ೪ x ೪೦೦ ಮೀ. ರಿಲೇಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಸುರೇಶ್ ಗೌಡ ಮತ್ತು ವಿದ್ಯಶ್ರೀ ದಂಪತಿ ಪುತ್ರಿ ೯ನೇ ತರಗತಿಯ ದೃಶಾನ ಎಸ್. ಸರಳಿಕಾನ ೪೦೦ ಮೀಟರ್ ಓಟದಲ್ಲಿ ತೃತೀಯ ಸ್ಥಾನ ಮತ್ತು ೪x೪೦೦ ಮೀ. ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಮೋಹನ್ ಗೌಡ ಮತ್ತು ಪ್ರಮೀಳಾ ದಂಪತಿ ಪುತ್ರ, ೮ನೇ ತರಗತಿಯ ಆರ್ಯ ಮೋಹನ್ ಎಚ್. ಲಾಂಗ್ ಜಂಪ್‌ನಲ್ಲಿ ದ್ವಿತೀಯ ಸ್ಥಾನ ಹಾಗೂ ಅವಿನಾಶ್ ಮಳಿ ಹಾಗೂ ರಂಜಿತಾ ಅವಿನಾಶ್ ಮಳಿ ದಂಪತಿ ಪುತ್ರಿ ಅನುಶ್ರೀ ಎಂ. ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಮಹೇಶ್ ಶೆಟ್ಟಿ ಮತ್ತು ಸುಕನ್ಯಾ ಕೆ.ಶೆಟ್ಟಿ ದಂಪತಿ ಪುತ್ರ, ೭ನೇ ತರಗತಿಯ ದೀಪಾಂಶ್ ಶೆಟ್ಟಿ ೬೦೦ ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
೧೭ ವರ್ಷದೊಳಗಿನ ಬಾಲಕಿಯರ ವಿಭಾಗದ ತಂಡವು, ಸಮಗ್ರ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ, ಲಾಸ್ಯಾ ಸಂತೋಷ್, ಆರುಷಿ ಎನ್, ಬಿ. ತ್ರಿಷಾ, ಆರ್ಯ ಮೋಹನ್, ಎಚ್ ಹಾಗೂ ದೀಪಾಂಶ್ ಶೆಟ್ಟಿ ರಾಜ್ಯಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಗೆ ಆಯ್ಕೆಗೊಂಡಿದ್ದು, ಅಕ್ಟೋಬರ್ ೩ರಿಂದ ೫ರವರೆಗೆ ಬೆಂಗಳೂರಿನಲ್ಲಿ ಜರುಗಲಿದೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ದೈಹಿಕ ಶಿಕ್ಷಕರಾದ ಸಂತೋಷ್ ಹಾಗೂ ಸುಚಿತ್ರಾ ತರಬೇತಿ ಹಾಗೂ ಮಾರ್ಗದರ್ಶನವನ್ನು ನೀಡಿರುತ್ತಾರೆ.


