Thursday, June 25, 2026
Homeಕರಾವಳಿಮಂಗಳೂರುಬಿಗ್ ಬಾಸ್ ಮನೆ ಹೊಕ್ಕ ಒಂದೇ ಗಂಟೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ರಕ್ಷಿತಾ...

ಬಿಗ್ ಬಾಸ್ ಮನೆ ಹೊಕ್ಕ ಒಂದೇ ಗಂಟೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ರಕ್ಷಿತಾ ಶೆಟ್ಟಿ

- Advertisement -
- Advertisement -

ಬೆಂಗಳೂರು; ನಿನ್ನೆಯಷ್ಟೇ ಬಿಗ್ ಬಾಸ್ ಸೀಸನ್ 12 ಆರಂಭವಾಗಿದ್ದು 19 ಮಂದಿ ಸ್ಪರ್ಧಿಗಳು ದೊಡ್ಮನೆಗೆ ಪ್ರವೇಶ ಮಾಡಿದ್ದಾರೆ. ಅದರಲ್ಲಿ ಕರಾವಳಿ ಹುಡ್ಗಿ ಬಲೆ ಬಲೆ ಗೈಸ್ ಖ್ಯಾತಿಯ ಯುಟ್ಯೂಬರ್ ರಕ್ಷಿತಾ ಕೂಡ ಒಬ್ಬರು.ಅವರು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ ಖುಷಿಯಲ್ಲಿರುವಾಗಲೇ ಕರಾವಳಿ ಮಂದಿಗೆ ಬಿಗ್ ಶಾಕ್ ಎದುರಾಗಿದೆ.

ಹೌದು.. ಬಿಗ್ ಬಾಸ್ ಮನೆಗೆ ಹೋದ ಕೇವಲ ಒಂದೇ ಒಂದು ಗಂಟೆಯಲ್ಲಿ ರಕ್ಷಿತಾ ಎಲಿಮಿನೇಟ್ ಆಗಿದ್ದಾರೆ. ಕಲರ್ಸ್ ಕನ್ನಡ ಇಂದು ಪ್ರಸಾರ ಮಾಡಿದ ಪ್ರೋವೋದಲ್ಲಿ 19 ಸ್ಪರ್ಧಿಗಳಲ್ಲಿ ಒಬ್ಬರು ಎಲಿಮಿನೇಟ್ ಆಗ್ತಾರೆ ಎಂದು ಬಿಗ್ ಬಾಸ್ ಹೇಳ್ತಾರೆ. ಅದರಂತೆ ಮಾಳು ನಿಪ್ನಾಳ್, ಸ್ಪಂದನಾ ಸೋಮಣ್ಣ ಹಾಗೂ ರಕ್ಷಿತಾ ನಾಮಿನೇಟ್ ಆಗಿರ್ತಾರೆ. ಆದರೆ ಈ ಮೂವರಲ್ಲಿ ರಕ್ಷಿತಾ ಎಲಿಮಿನೇಟ್ ಆಗಿದ್ದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.

- Advertisement -

Latest News

error: Content is protected !!